ADVERTISEMENT

ಒಂದು ಕೈಯಲ್ಲಿ ಅದ್ಭುತ ಕ್ಯಾಚ್: ಹರ್ಮನ್‌ಪ್ರೀತ್ ಕೌರ್ ವಿಡಿಯೊ ವೈರಲ್‌

ಮಹಿಳಾ ಏಕದಿನ ಕ್ರಿಕೆಟ್

ಏಜೆನ್ಸೀಸ್
Published 3 ನವೆಂಬರ್ 2019, 7:12 IST
Last Updated 3 ನವೆಂಬರ್ 2019, 7:12 IST
   

ನವದೆಹಲಿ: ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸ್ಟೆಫಿನಿಟೇಲರ್ ಬಾರಿಸಿದ ಚೆಂಡನ್ನುಹರ್ಮನ್‌ಪ್ರೀತ್ಕೌರ್ ಅವರು ಡೈವ್‌ ಹೊಡೆದುಒಂದು ಕೈಯಲ್ಲಿ ಕ್ಯಾಚ್‌ಹಿಡಿದ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿವೈರಲ್ ಅಗಿದೆ. ಈಅದ್ಭುತ ಕ್ಯಾಚ್‌ಗಾಗಿ ಅವರಿಗೆ ಸಾಮಾಜಿಕಜಾಲತಾಣಗಳಲ್ಲಿಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವೆ 3 ಏಕದಿನ ಪಂದ್ಯಗಳ ಸರಣಿಯನ್ನು ಆಯೋಜಿಸಲಾಗಿದ್ದು, ಗುರುವಾರಸರ್‌ವಿವಿಯನ್‌ ರಿರ್ಚಡ್‌ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಒಂದು ರನ್‌ಗಳ ಅಂತರದಲ್ಲಿ ಭಾರತಸೋತಿದೆ. ಮೊದಲುಬ್ಯಾಟಿಂಗ್ನಡೆಸಿದ ವೆಸ್ಟ್ಇಂಡೀಸ್ತಂಡವು 225 ರನ್‌ ಗಳಿಸಿತ್ತು. ಇದನ್ನುಬೆನ್ನಟ್ಟಿದಭಾರತವು 224ರನ್‌ ಕಲೆಹಾಕಿದ್ದು ಒಂದು ರನ್‌ಗಳ ಅಂತರದಿಂದಪರಾಭವಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT