ADVERTISEMENT

ಕನ್ನಡಿಗ ಸ್ಮರಣ್‌ಗೆ ಗಾಯ: ಸನ್‌ ರೈಸರ್ಸ್‌ ಸೇರಿದ ಹರ್ಷ ದುಬೆ

ಪಿಟಿಐ
Published 5 ಮೇ 2025, 19:56 IST
Last Updated 5 ಮೇ 2025, 19:56 IST
<div class="paragraphs"><p> ಹರ್ಷ ದುಬೆ </p></div>

ಹರ್ಷ ದುಬೆ

   

ಹೈದರಾಬಾದ್‌: ಗಾಯಗೊಂಡಿರುವ ಎಡಗೈ ಬ್ಯಾಟರ್‌ ಸ್ಮರಣ್‌ ರವಿಚಂದ್ರನ್‌ ಬದಲು ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಆಲ್‌ರೌಂಡರ್‌ ಹರ್ಷ ದುಬೆ ಅವರಿಗೆ ಸ್ಥಾನ ಕಲ್ಪಿಸಿದೆ. 

ದೇಶಿ ಕ್ರಿಕೆಟ್‌ನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ದುಬೆ ಅವರು ₹30 ಲಕ್ಷ ಮೂಲಬೆಲೆಗೆ ಸನ್‌ರೈಸರ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ.

ADVERTISEMENT

22 ವರ್ಷ ವಯಸ್ಸಿನ ಈ ಆಟಗಾರ 16 ಟಿ20, 20 ಎ ದರ್ಜೆ ಪಂದ್ಯಗಳು ಮತ್ತು 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 127 ವಿಕೆಟ್‌ ಮತ್ತು ಎಲ್ಲಾ ಮಾದರಿಗಳಲ್ಲಿ 941 ರನ್‌ ಕಲೆ ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.