ADVERTISEMENT

ಹಾಕಿ: ಸೆಮಿಗೆ ಹರಿಯಾಣ, ಜಾರ್ಖಂಡ್‌

ಪಿಟಿಐ
Published 9 ಆಗಸ್ಟ್ 2025, 15:01 IST
Last Updated 9 ಆಗಸ್ಟ್ 2025, 15:01 IST
ಹಾಕಿ ಇಂಡಿಯಾ
ಹಾಕಿ ಇಂಡಿಯಾ   

ಕಾಕಿನಾಡ, ಆಂಧ್ರಪ್ರದೇಶ: ಹರಿಯಾಣ, ಛತ್ತೀಸಗಢ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ತಂಡಗಳು ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ (ಡಿವಿಷನ್ ಎ) ಸೆಮಿಫೈನಲ್‌ಗೆ ಮುನ್ನಡೆದಿವೆ.

ಶನಿವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಹರಿಯಾಣ 4–1 ಗೋಲುಗಳಿಂದ ಒಡಿಶಾ ವಿರುದ್ಧ; ಜಾರ್ಖಂಡ್ 3–1ರಿಂದ ಪಂಜಾಬ್‌ ವಿರುದ್ಧ; ಉತ್ತರ ಪ್ರದೇಶ 2–1ರಿಂದ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿದವು. ಛತ್ತೀಸಗಢ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 2–1ರಿಂದ ಮಧ್ಯಪ್ರದೇಶ ತಂಡವನ್ನು ಮಣಿಸಿತು. ನಿಗದಿತ ಅವಧಿಯ ಪಂದ್ಯ 1–1ರಿಂದ ಡ್ರಾಗೊಂಡಿತ್ತು.

ಭಾನುವಾರ ಮೊದಲ ಸೆಮಿಫೈನಲ್‌ನಲ್ಲಿ ಹರಿಯಾಣ ಮತ್ತು ಛತ್ತೀಸಗಢ; ಎರಡನೇ ಪಂದ್ಯದಲ್ಲಿ ಜಾರ್ಖಂಡ್‌ ಮತ್ತು ಉತ್ತರ ಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಮಂಗಳವಾರ ಫೈನಲ್‌ ಪಂದ್ಯ ನಡೆಯಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.