ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹೆನ್ರಿಚ್ ಕ್ಲಾಸನ್ ನಿವೃತ್ತಿ

ಪಿಟಿಐ
Published 3 ಜೂನ್ 2025, 23:30 IST
Last Updated 3 ಜೂನ್ 2025, 23:30 IST
ಹೆನ್ರಿಚ್ ಕ್ಲಾಸೆನ್
ಹೆನ್ರಿಚ್ ಕ್ಲಾಸೆನ್   

ಕೇಪ್‌ಟೌನ್: ದಕ್ಷಿಣ ಆಫ್ರಿಕಾದ ಸ್ಫೋಟಕ ಶೈಲಿಯ ಬ್ಯಾಟರ್‌ ಹೆನ್ರಿಚ್‌ ಕ್ಲಾಸನ್ ಅವರು ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ  ವಿದಾಯ ಹೇಳಿದರು.

ಹೋದ ವರ್ಷ ಜನವರಿಯಲ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಉಳಿದೆಲ್ಲ ಮಾದರಿಗೆ
ನಿವೃತ್ತಿ ಘೋಷಿಸಿದ್ದಾರೆ.

 33 ವರ್ಷ ವಯಸ್ಸಿನ ಕ್ಲಾಸನ್  ಅವರು 4 ಟೆಸ್ಟ್, 60 ಏಕದಿನ ಮತ್ತು 58 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.  ಏಕದಿನ ಕ್ರಿಕೆಟ್‌ನಲ್ಲಿ ಅವರು 2141 ರನ್‌ ಗಳಿಸಿದ್ದಾರೆ. ಟಿ20 ಮಾದರಿಯಲ್ಲಿ1000 ರನ್‌ ಕಲೆ ಹಾಕಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.