ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಮಂಡಳಿ ಸಭೆ ಸೋಮವಾರ ನಡೆಯಲಿದ್ದು ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಕೆ ಚಟುವಟಿಕೆಗೆ ಅಂತಿಮ ರೂಪ ನೀಡಲಿದೆ.
ಆನ್‌ಲೈನ್ ಮೂಲಕ ನಡೆಯಲಿರುವ ಸಭೆಯ ಕಾರ್ಯಸೂಚಿಯಲ್ಲಿ ಈ ಒಂದಂಶ ಮಾತ್ರ ಇದ್ದು ಚುನಾವಣೆಯಾಗಲಿ, ಅವಿರೋಧ ಆಯ್ಕೆಯಾಗಲಿ ನಾಲ್ಕು ವಾರಗಳ ಒಳಗೆ ನಡೆಸಲು ಐಸಿಸಿ ನಿರ್ಧರಿಸಿದೆ ಎನ್ನಲಾಗಿದೆ.
‘ನಾಮಪತ್ರ ಸಲ್ಲಿಕೆಗೆ ಎರಡು ವಾರಗಳ ಕಾಲ ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಾರಿ ಮುಖ್ಯಸ್ಥರ ಆಯ್ಕೆಗೆ ಸರಳ ಬಹುಮತ ಪರಿಗಣಿಸಲು ಅವಕಾಶ ನೀಡುವಂತೆ 17 ಸದಸ್ಯರ ಮಂಡಳಿ ಆಗ್ರಹಿಸಿದೆ’ ಎಂದು ಸದಸ್ಯರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.