ವಿಶಾಖಪಟ್ಟಣ: ಭಾರತ ವಿರುದ್ಧದ ಏಕದಿನ ವಿಶ್ವ ಕಪ್ ಪಂದ್ಯದಲ್ಲಿ ನೀತಿಸಂಹಿತೆ ಉಲ್ಲಂಘನೆ ಮಾಡಿದ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ನೊನ್‌ಕುಲುಲೆಕೊ ಮ್ಲಾಬಾ ಅವರಿಗೆ ಐಸಿಸಿಯು ವಾಗ್ದಂಡನೆ ವಿಧಿಸಿದೆ. ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸಹ ಸೇರಿಸಿದೆ.
ಭಾರತ ತಂಡವು ಗುರುವಾರ ನಡೆದ ಈ ಪಂದ್ಯದಲ್ಲಿ ಸೋಲನುಭವಿಸಿತ್ತು. ಭಾರತದ ಬ್ಯಾಟಿಂಗ್ ವೇಳೆ, 17ನೇ ಓವರಿನಲ್ಲಿ ಮ್ಲಾಬಾ ಅವರು ಹರ್ಲೀನ್ ಡಿಯೋಲ್ ವಿಕೆಟ್ ಪಡೆದ ಮೇಲೆ ‘ಗುಡ್ ಬೈ’ ರೀತಿ ಕೈಬೀಸಿ ಸಂಜ್ಞೆ ಮಾಡಿದ್ದರು. ಅವರ ವರ್ತನೆ ಎದುರಾಳಿ ಬ್ಯಾಟರ್‌ಗೆ ಪ್ರಚೋದಿಸುವ ರೀತಿಯಲ್ಲಿದ್ದ ಕಾರಣ ಆನ್‌ಫೀಲ್ಡ್ ಅಂಪೈರ್‌ಗಳು ಈ ಬಗ್ಗೆ ರೆಫ್ರಿ ಅವರಿಗೆ ವರದಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.