ADVERTISEMENT

ಐಸಿಸಿ ಮಹಿಳಾ ಏಕದಿನ ವಿಶ್ವಕಪ್: ಸಿದ್ಧತಾ ಶಿಬಿರ ಪೂರೈಸಿದ ಭಾರತ ತಂಡ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 15:27 IST
Last Updated 14 ಆಗಸ್ಟ್ 2025, 15:27 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಪೂರ್ವಭಾವಿಯಾಗಿ ಭಾರತ ಮಹಿಳಾ ತಂಡ ಇಲ್ಲಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಹತ್ತು ದಿನಗಳ ಸಿದ್ಧತಾ ಶಿಬಿರವನ್ನು ಗುರುವಾರ ಮುಗಿಸಿತು. ಶಿಬಿರದಲ್ಲಿ ಫಿಟ್ನೆಸ್‌ಗೆ ಒತ್ತು ನೀಡಲಾಯಿತು ಮತ್ತು ಪಂದ್ಯ ಸನ್ನಿವೇಶ ಗಮನದಲ್ಲಿಟ್ಟುಕೊಂಡು ಅಭ್ಯಾಸ ನಡೆಸಲಾಯಿತು.

ADVERTISEMENT

ಈ ಹಿಂದೆ ಭಾರತ ಎಂದೂ ಐಸಿಸಿ ಟ್ರೋಫಿ ಗೆದ್ದುಕೊಂಡಿಲ್ಲ. ಈ ಬಾರಿ ಪ್ರಮುಖ ಪ್ರಶಸ್ತಿ ಬರವನ್ನು ನೀಗಿಸುವ ನಿರೀಕ್ಷೆಯಲ್ಲಿದೆ. ಸೆಪ್ಟೆಂಬರ್‌ 30ರದು ವಿಶ್ವಕಪ್ ಆರಂಭವಾಗಲಿದೆ.

‘ಶಿಬಿರದಲ್ಲಿ ಫಿಟ್ನೆಸ್‌ಗೆ ಗಮನಹರಿಸಲಾಯಿತು. ಕೌಶಲ ಸುಧಾರಿಸುವ ಮತ್ತು ಮುಂದಿನ ಸವಾಲುಗಳಿಗೆ ತಂಡವನ್ನು ಸಜ್ಜುಗೊಳಿಸಲು ಒತ್ತು ನೀಡಲಾಯಿತು’ ಎಂದು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಭಾರತ ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿ ಸೆಪ್ಟೆಂಬರ್ 14ರಂದು ಶುರುವಾಗಲಿದೆ. ಭಾರತ ವಿಶ್ವಕಪ್‌ನ ಮೊದಲ ಪಂದ್ಯವನ್ನು ಸೆ. 30ರಂದು ಶ್ರೀಲಂಕಾ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.