ADVERTISEMENT

ಮಹಿಳಾ ಟಿ20 ವಿಶ್ವಕಪ್ | ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ 42 ರನ್ ಜಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 12:32 IST
Last Updated 28 ಫೆಬ್ರುವರಿ 2020, 12:32 IST
ಇಂಗ್ಲೆಂಡ್‌ ತಂಡದ ನಾಯಕಿ ಹೀದರ್‌ ನೈಟ್‌ ಬ್ಯಾಟಿಂಗ್‌ ವೈಖರಿ
ಇಂಗ್ಲೆಂಡ್‌ ತಂಡದ ನಾಯಕಿ ಹೀದರ್‌ ನೈಟ್‌ ಬ್ಯಾಟಿಂಗ್‌ ವೈಖರಿ   

ಕ್ಯಾನ್‌ಬೆರಾ:ಮಹಿಳೆಯರ ಟಿ 20 ವಿಶ್ವಕಪ್‌ ಟೂರ್ನಿಯಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ,ಇಂಗ್ಲೆಂಡ್‌ ತಂಡ 42 ರನ್ ಅಂತರದ ಗೆಲುವು ಸಾಧಿಸಿತು.

ಇಲ್ಲಿನ ಮಾನುಕಾ ಓವಲ್‌ ಮೈದಾನದಲ್ಲಿನಡೆದ ಪಂದ್ಯದಲ್ಲಿಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್‌, ನಾಯಕಿ ಹೀದರ್‌ ನೈಟ್‌ (62) ಗಳಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ7 ವಿಕೆಟ್‌ ಕಳೆದುಕೊಂಡು 158 ರನ್‌ ಪೇರಿಸಿತ್ತು.

ಬಳಿಕ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನ 19.4 ಓವರ್‌ಗಳಲ್ಲಿ ಕೇವಲ 116 ರನ್‌ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಕೇವಲ 62 ರನ್‌ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್‌ ಕಳೆದುಕೊಂಡಿದ್ದ ಪಾಕ್‌, ನೂರು ರನ್‌ ಗಳಿಸುವುದೇ ಕಷ್ಟವಿತ್ತು.ಆದರೆ, ಆಲ್ರೌಂಡರ್‌ ಆಲಿಯಾ ರಿಯಾಜ್‌ (42), ಕೊನೆಯಲ್ಲಿ ಅಬ್ಬರಿಸಿದ್ದರಿಂದ ತಂಡದ ಮೊತ್ತ ಶತಕ ದಾಟಿತು. ಆದಾಗ್ಯೂ ಪಾಕ್‌ಗೆ ಗೆಲುವು ಸಾಧ್ಯವಾಗಲಿಲ್ಲ.ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಆಲೌಟ್‌ ಆಯಿತು.

ADVERTISEMENT

ಇಂಗ್ಲೆಂಡ್‌ನ ಅನ್ಯಾ ಶೃಬ್ಸೋಲೆ ಮತ್ತು ಸಾರಾ ಗ್ಲೆನ್‌ ತಲಾ 3 ವಿಕೆಟ್‌ ಪಡೆದರೆ, ಕ್ಯಾಥರಿನ್‌ ಬ್ರಂಟ್‌ ಮತ್ತು ಸೋಫೀ ಎಕ್ಲೆಸ್ಟೋನ್‌ ಎರಡೆರಡು ವಿಕೆಟ್‌ ಹಂಚಿಕೊಂಡರು.

ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ತಮ್ಮ ಮುಂದಿನ ಪಂದ್ಯದಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಲಿವೆ.ಈ ಪಂದ್ಯಗಳು ಸಿಡ್ನಿಯಲ್ಲಿ ಮಾರ್ಚ್‌ 1ರಂದು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.