ಹಸಿನಿ ಪರೇರಾ
ಚಿತ್ರ ಕೃಪೆ: ಐಸಿಸಿ
ನವಿ ಮುಂಬೈ: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಸೋಮವಾರ) ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ 48.4 ಓವರ್‌ಗಳಲ್ಲಿ 202 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.
ತಂಡವು ಒಂದು ಹಂತದಲ್ಲಿ 16.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಬಳಿಕ ದಿಢೀರ್ ಪತನವನ್ನು ಕಂಡಿತ್ತು.
ಹಸಿನಿ ಪರೇರಾ ಗರಿಷ್ಠ 85 ರನ್ ಗಳಿಸಿದರು. ನಾಯಕಿ ಚಮರಿ ಅಟ್ಟಪಟ್ಟು 46 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಕೆಳ ಕ್ರಮಾಂಕದಲ್ಲಿ ನಿಲಾಕ್ಷಿ ಡಿಸಿಲ್ವ 37 ರನ್ ಗಳಿಸಿದರು. ಬಾಂಗ್ಲಾದೇಶದ ಪರ ಶೋರ್ನಾ ಅಖ್ತೆರ್ ಮೂರು ವಿಕೆಟ್ ಗಳಿಸಿದರು.
ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ...
ಈ ಮೊದಲು ನವಿ ಮುಂಬೈಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾದ ನಾಯಕಿ ಚಮರಿ ಅಟ್ಟಪಟ್ಟು ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಶ್ರೀಲಂಕಾ ಟೂರ್ನಿಯಲ್ಲಿ ಮೊದಲ ಜಯದ ಹುಡುಕಾಟದಲ್ಲಿದೆ. ಇದುವರೆಗೆ ಆಡಿರುವ ಐದು ಪಂದ್ಯಗಳ ಪೈಕಿ ಮೂರು ಸೋಲು ಕಂಡಿದೆ. ಎರಡು ಪಂದ್ಯ ಮಳೆಯಿಂದ ರದ್ದಾದ ಕಾರಣ ಎರಡು ಅಂಕಗಳನ್ನು ಗಳಿಸಿದೆ. ಅಲ್ಲದೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ಅತ್ತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲಿರುವ ಬಾಂಗ್ಲಾದೇಶ, ಐದು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ನಾಲ್ಕರಲ್ಲಿ ಸೋಲು ಕಂಡಿದೆ. ಇತ್ತಂಡಗಳಿಗೂ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಕ್ಷೀಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.