ಇಂದೋರ್: ಮಹಿಳಾ ವಿಶ್ವಕಪ್‌ನ 23ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬೌಲಿಂಗ್ ಆಯ್ದುಕೊಂಡಿದೆ.
ಆಡಿರುವ ಐದು ಪಂದ್ಯಗಳಲ್ಲಿ ಉಭಯ ತಂಡಗಳು ಕೂಡ ನಾಲ್ಕರಲ್ಲಿ ಗೆದ್ದಿದ್ದು, ಒಂದು ಪಂದ್ಯ ರದ್ದಾಗಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಒಂಬತ್ತು ಅಂಕಗಳೊಂದಿಗೆ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದ್ದು, ಟೂರ್ನಿಯಲ್ಲಿ ಅಜೇಯವಾಗಿ ಉಳಿದಿವೆ.
ಆಸ್ಟ್ರೇಲಿಯಾ ತಂಡವು 3 ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಇಂಗ್ಲೆಂಡ್ ತಂಡವು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಆಸ್ಟ್ರೇಲಿಯಾ ನಾಯಕಿ ಅಲಿಸಾ ಹೀಲಿ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದು, ತಹ್ಲಿಯಾ ಮೆಕ್‌ಗ್ರಾತ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಆಸ್ಟ್ರೇಲಿಯಾ ಮಹಿಳಾ ತಂಡ: ಜಾರ್ಜಿಯಾ ವೋಲ್, ಫೋಬೆ ಲಿಚ್‌ಫೀಲ್ಡ್, ಎಲ್ಲಿಸ್ ಪೆರ್ರಿ, ಬೆತ್ ಮೂನಿ(ವಿಕೆಟ್ ಕೀಪರ್), ಅನ್ನಾಬೆಲ್ ಸದರ್ಲ್ಯಾಂಡ್, ಆಶ್ಲೀ ಗಾರ್ಡ್ನರ್, ತಹ್ಲಿಯಾ ಮೆಕ್‌ಗ್ರಾತ್(ನಾಯಕಿ), ಸೋಫಿ ಮೊಲಿನೆಕ್ಸ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶುಟ್
ಇಂಗ್ಲೆಂಡ್ ಮಹಿಳಾ ತಂಡ: ಟ್ಯಾಮಿ ಬ್ಯೂಮಾಂಟ್, ಆಮಿ ಜೋನ್ಸ್(ವಿಕೆಟ್ ಕೀಪರ್), ಹೀದರ್ ನೈಟ್, ನ್ಯಾಟ್ ಸಿವರ್-ಬ್ರಂಟ್(ನಾಯಕಿ), ಸೋಫಿಯಾ ಡಂಕ್ಲಿ, ಎಮ್ಮಾ ಲ್ಯಾಂಬ್, ಆಲಿಸ್ ಕ್ಯಾಪ್ಸಿ, ಷಾರ್ಲೆಟ್ ಡೀನ್, ಸೋಫಿ ಎಕ್ಲೆಸ್ಟೋನ್, ಲಿನ್ಸೆ ಸ್ಮಿತ್, ಲಾರೆನ್ ಬೆಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.