
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ 2025ಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಹಿಳಾ ಕ್ರಿಕೆಟ್‌ನ ಮಹತ್ವದ ಟೂರ್ನಿಯಲ್ಲಿ ಪ್ರಮುಖ ತಂಪು ಪಾನೀಯ ಕಂಪನಿ ಕೋಕಾ ಕೋಲಾ, ಐಸಿಸಿ ಜತೆಗೂಡಿ ‘ಮೈದಾನ್ ಸಾಫ್’ ಅಭಿಯಾನವನ್ನು ಮಾಡುತ್ತಿದೆ.
‘ಮೈದಾನ್ ಸಾಫ್’ ಅಭಿಯಾನದಲ್ಲಿ ವಿವಿಧ ರೀತಿಯ ಉಪಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಸೆ.30 ರಿಂದ ನ. 2ರ ವರೆಗೆ ಮಹಿಳಾ ವಿಶ್ವಕಪ್ ನಡೆಯಲಿದ್ದು, ಟೂರ್ನಿಯ ವೇಳೆ ಸ್ವಚ್ಛತೆಗೆ ಸಂಬಂಧಿಸಿದ ವಿವಿಧ ಅಭಿಯಾನವನ್ನು ಮಾಡಲಾಗುತ್ತಿದೆ. ಟೂರ್ನಿ ನಡೆಯುವ ಎಲ್ಲಾ ಕ್ರೀಡಾಂಗಣಗಳಲ್ಲೂ ತ್ಯಾಜ್ಯ ಮರುಬಳಕೆ, ಪ್ರಾಯೋಗಿಕ ತ್ಯಾಜ್ಯ ಪರಿಹಾರಗಳ ಅಳವಡಿಕೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಅಭಿಮಾನಿಗಳೊಂದಿಗೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಕಾ ಕೋಲಾ ತಿಳಿಸಿದೆ.
ಕ್ರೀಡಾಂಗಣದ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸ್ವಯಂಸೇವಕರು ಕೂಡ ತ್ಯಾಜ್ಯ ನಿರ್ವಹಣೆ ಕುರಿತು ಕ್ರೀಡಾಂಗಣದಲ್ಲಿರುವ ಅಭಿಮಾನಿಗಳಿಗೆ ಚಟುವಟಿಕೆಗಳ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದೆ.
ಭಾರತದಲ್ಲಿ ನಡೆದಿದ್ದ 2023ರ ಪುರುಷರ ವಿಶ್ವಕಪ್ ಟೂರ್ನಿಯ ವೇಳೆಯೂ ಕೋಕಾ ಕೋಲಾ ಕಂಪನಿಯು ಇದೇ ರೀತಿಯ ಅಭಿಯಾನವನ್ನು ಹಮ್ಮಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.