ADVERTISEMENT

AUS Vs BAN: ಆಸೀಸ್‌ಗೆ 307ರನ್‌ಗಳ ಗೆಲುವಿನ ಗುರಿ ನೀಡಿದ ಬಾಂಗ್ಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2023, 9:15 IST
Last Updated 11 ನವೆಂಬರ್ 2023, 9:15 IST
<div class="paragraphs"><p>AUS Vs BAN</p></div>

AUS Vs BAN

   

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಆಸೀಸ್‌ಗೆ ಗೆಲ್ಲಲು ಬಾಂಗ್ಲಾದೇಶ 307ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ.

ಬಾಂಗ್ಲಾದೇಶದ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 306 ರನ್‌ ಪೇರಿಸಿದೆ. ಆಸೀಸ್‌ ಈ ಪಂದ್ಯ ಗೆಲ್ಲಲು 307ರನ್‌ ಗಳಿಸಬೇಕಿದೆ.  

ನಾಯಕ ನಜ್ಮುಲ್‌ ಹಸನ್‌ ಶಾಂತೊ 45, ತೌಹಿದ್‌ ಹ್ರಿಡೊಯ್‌ 74 ರನ್‌ ಗಳಿಸಿ ಗಮನ ಸೆಳೆದರು. ಆಸೀಸ್‌ ಪರ ಜಂಪಾ ಹಾಗೂ ಸೀನ್ ಅಬಾಟ್ ತಲಾ ಎರಡು ವಿಕೆಟ್‌ ಪಡೆದರು. 

ಕಳೆದ ಪಂದ್ಯದಲ್ಲಿ ವಿಸ್ಮಯಕಾರಿ ದ್ವಿಶತಕ ಬಾರಿಸಿ ತಂಡವನ್ನು ಪವಾಡಸದೃಶವಾಗಿ ಗೆಲ್ಲಿಸಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ ಅವರು ಈ ಪಂದ್ಯದಿಂದ ಹೊರಗುಳಿದಿದ್ದಾರೆ.

ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಬಾಂಗ್ಲಾದೇಶ ತಂಡಕ್ಕೆ ಇದು ಔಪಚಾರಿಕ ಪಂದ್ಯವಾಗಿದೆ. ಆಸೀಸ್‌ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.