ADVERTISEMENT

IPL: ಓವರ್‌ನಲ್ಲಿ 2 ಬೌನ್ಸರ್; ಸ್ಫೋಟಕ ಬ್ಯಾಟರ್ ಲಿವಿಂಗ್‌ಸ್ಟೋನ್ ಹೇಳಿದ್ದಿಷ್ಟು

ಪಿಟಿಐ
Published 22 ಮಾರ್ಚ್ 2024, 12:53 IST
Last Updated 22 ಮಾರ್ಚ್ 2024, 12:53 IST
<div class="paragraphs"><p>ಲಿವಿಂಗ್‌ಸ್ಟೋನ್</p></div>

ಲಿವಿಂಗ್‌ಸ್ಟೋನ್

   

ಪಿಟಿಐ ಚಿತ್ರ

ಚಂಡೀಗಢ: ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ(ಐಪಿಎಲ್) ಒಂದೇ ಓವರ್‌ನಲ್ಲಿ ಎರಡು ಬೌನ್ಸರ್‌ಗೆ ಅವಕಾಶ ನೀಡಲಾಗಿದ್ದು, ಮೇಲೇರಿ ಬರುವ ಚೆಂಡನ್ನು ಸಿಕ್ಸರ್ ಬಾರಿಸುವುದೇ ಅದನ್ನು ನಿರ್ವಹಿಸುವ ಉತ್ತಮ ವಿಧಾನ ಎಂದು ಇಂಗ್ಲೆಂಡ್ ಮೂಲದ ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಹೇಳಿದ್ದಾರೆ.

ADVERTISEMENT

ಆಧುನಿಕ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಅನುಕೂಲವೇ ಹೆಚ್ಚಿರುತ್ತದೆ. ಈಗ ಟಿ–20 ಕ್ರಿಕೆಟ್‌ನಲ್ಲಿ ಬೌಲರ್‌ಗಳಿಗೆ ಎರಡು ಬೌನ್ಸರ್‌ಗೆ ಅವಕಾಶ ನೀಡಿರುವುದು ಬೌಲರ್‌ಗಳಿಗೆ ಹೆಚ್ಚಿನ ಆಯ್ಕೆಯನ್ನು ನೀಡಿದೆ ಎಂದು ಹೇಳಿದ್ದಾರೆ.

‘ಒಂದು ಓವರ್‌ನಲ್ಲಿ ಒಂದು ಅಥವಾ ಎರಡು, ಎಷ್ಟೇ ಬೌನ್ಸರ್ ಬರಲಿ ಒಬ್ಬ ಬ್ಯಾಟರ್ ಆಗಿ ನೀವು ಅದನ್ನು ನಿರ್ವಹಿಸುವ ಬಗ್ಗೆ ಅರಿತಿರಬೇಕು. ಬೌನ್ಸರ್ ಎಷ್ಟು ಹಾಕುತ್ತಾರೆ ಎಂಬುದು ಮುಖ್ಯವೇ ಅಲ್ಲ. ಚೆಂಡು ನಿಮ್ಮ ತಲೆಮೇಲೇರಿ ಬರುತ್ತಿದ್ದರೆ ಅದನ್ನು ಸಿಕ್ಸರ್ ಎತ್ತಲು ಪ್ರಯತ್ನಿಸಬೇಕು. ಒಬ್ಬ ಬ್ಯಾಟರ್ ಆಗಿ ಅಂತಹ ಕೌಶಲ್ಯವನ್ನು ಬೆಳೆಸಿಕೊಂಡಿರಬೇಕು’ ಎಂದು ಅವರು ಹೇಳಿದ್ದಾರೆ.

‘ಯಾರ್ಕರ್‌ಗಳನ್ನು ಸಿಕ್ಸರ್ ಎತ್ತುವ ಬದಲು ಬೌನ್ಸರ್‌ಗಳ ಮೂಲಕ ಸಿಕ್ಸರ್ ಹೊಡೆಯಲು ನಾವು ಪ್ರಯತ್ನಿಸಬೇಕು. ಏಕೆಂದರೆ, ಬೌಲರ್‌ಗಳಿಗೆ ಈಗ ಆಯ್ಕೆ ಹೆಚ್ಚಿದೆ. ದೊಡ್ಡ ಮೈದಾನಗಳಲ್ಲಿ ಅದು ಪರಿಣಾಮಕಾರಿಯಾಗಿರಲಿದೆ. ಚಿಕ್ಕ ಮೈದಾನಗಳಲ್ಲಿ ಬೌಲರ್ ಎಷ್ಟು ಬೌನ್ಸರ್ ಹಾಕುತ್ತಾರೊ ಕಾದುನೋಡಬೇಕು’ಎಂದಿದ್ದಾರೆ.

‘ಬ್ಯಾಟ್‌ನ ಟಾಪ್ ಎಡ್ಜ್‌ಗೆ ತಗಲುವ ಚೆಂಡು ಬೌಂಡರಿ ಗೆರೆ ದಾಟುತ್ತದೆ. ಈಗ ಬಂದಿರುವ ಎರಡು ಬೌನ್ಸರ್ ನಿಯಮ ಕ್ರಿಕೆಟ್ ಜಗತ್ತಿನ ಸ್ಫೋಟಕ ಆಟಗಾರರ ವಿರುದ್ಧ ಬೌಲರ್‌ಗಳಿಗೆ ಅಸ್ತ್ರವಾಗಲಿದೆ’ ಎಂದು ಅರೆಕಾಲಿಕ ಸ್ಪಿನ್ನರ್ ಸಹ ಆಗಿರುವ ಲಿವಿಂಗ್‌ಸ್ಟೋನ್ ಹೇಳಿದ್ದಾರೆ.

IPL 2024: ಒಂದು ಓವರ್‌ನಲ್ಲಿ ಎರಡು ಬೌನ್ಸರ್; ಸ್ಫೊಟಕ ಬ್ಯಾಟರ್ ಲಿವಿಂಗ್‌ಸ್ಟೋನ್ ಹೇಳಿದ್ದಿಷ್ಟು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.