ADVERTISEMENT

ಭಾರತ ವಿರುದ್ಧ ಪಾಕ್ ಗೆಲ್ಲಬೇಕಾದರೆ ಹೀಗೆ ಮಾಡಿ: ಪಿಸಿಬಿ ಕಾಲೆಳೆದ ಇಮ್ರಾನ್ ಖಾನ್‌

ಪಿಟಿಐ
Published 22 ಸೆಪ್ಟೆಂಬರ್ 2025, 16:08 IST
Last Updated 22 ಸೆಪ್ಟೆಂಬರ್ 2025, 16:08 IST
   

ಲಾಹೋರ್‌: ಏಷ್ಯಾ ಕಪ್‌ನ ಲೀಗ್‌ ಹಾಗೂ ಸೂಪರ್‌–4 ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನವು ಮುಖಭಂಗ ಎದುರಿಸಿದ ನಂತರ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಅವರು ಪಿಸಿಬಿ ಕಾಲೆಳೆದಿದ್ದಾರೆ.

ಭಾರತ ವಿರುದ್ಧ ಕ್ರಿಕೆಟ್‌ ಪಂದ್ಯ ಗೆಲ್ಲಬೇಕಾದರೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹಾಗೂ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಅವರು ಆರಂಭಿಕರಾಗಿ ಕಣಕ್ಕಿಳಿಯಬೇಕು. ಪಾಕಿಸ್ತಾನದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಮತ್ತು ಚುನಾವಣಾ ಆಯೋಗದ ಮುಖ್ಯಸ್ಥ ಸಿಂಕದರ್‌ ಸುಲ್ತಾನ್‌ ರಾಜಾ ಅಂಪೈರ್‌ ಆಗಿರಬೇಕು ಎಂದು ಇಮ್ರಾನ್‌ ಖಾನ್‌ ಲೇವಡಿ ಮಾಡಿದ್ದಾರೆ ಎಂದು ಅವರ ಸಹೋದರಿ ಅಲೀಮ ಖಾನ್‌ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

1992ರ ಏಕದಿನ ವಿಶ್ವಕಪ್‌ ವಿಜೇತ ನಾಯಕರಾಗಿರುವ ಇಮ್ರಾನ್‌ ಖಾನ್‌, ‘ಪಾಕಿಸ್ತಾನ ಕ್ರಿಕೆಟ್‌ ತಂಡವು ಅಧಃಪತನಗೊಳ್ಳಲು ಮೊಹ್ಸಿನ್ ನಖ್ವಿ ಅವರ ಸ್ವಜನಪಕ್ಷಪಾತವೇ ಕಾರಣ’ ಎಂದು ಆರೋಪಿಸಿದ್ದಾರೆ.

ADVERTISEMENT

ಪಾಕಿಸ್ತಾನದ ಮಾಜಿ ಪ್ರಧಾನಿಯೂ ಆಗಿರುವ ಇಮ್ರಾನ್ ಖಾನ್‌, ಭ್ರಷ್ಟಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. 2023ರ ಆಗಸ್ಟ್‌ನಿಂದ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.