ADVERTISEMENT

ಭಾರತ–ನ್ಯೂಜಿಲೆಂಡ್‌ ಏಕದಿನ ಪಂದ್ಯ: ಮಳೆಯಿಂದಾಗಿ ಪಂದ್ಯ ವಿಳಂಬ‌

ಪಿಟಿಐ
Published 30 ನವೆಂಬರ್ 2022, 1:36 IST
Last Updated 30 ನವೆಂಬರ್ 2022, 1:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕ್ರೈಸ್ಟ್‌ಚರ್ಚ್‌: ಭಾರತ–ನ್ಯೂಜಿಲೆಂಡ್‌ ನಡುವಣ ಏಕದಿನ ಸರಣಿಯ ಅಂತಿಮ ಪಂದ್ಯವಾಗಿರುವ 3ನೇ ಏಕದಿನ ಪಂದ್ಯವು ಮಳೆಯಿಂದಾಗಿ ವಿಳಂಬವಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಂದ್ಯದ ಟಾಸ್‌ ಕೂಡ ನಡೆದಿಲ್ಲ.

ಹ್ಯಾಮಿಲ್ಟನ್‌ನ ಎರಡನೇ ಪಂದ್ಯ ಕೂಡ ಮಳೆಯಿಂದ ರದ್ದಾಗಿತ್ತು. ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯ ಸಾಧಿಸಿರುವ ನ್ಯೂಜಿಲೆಂಡ್‌ 1–0 ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT