ಇಂಗ್ಲೆಂಡ್ ತಂಡ
(ಚಿತ್ರ ಕೃಪೆ: X/@englandcricket)
ಎಜ್‌ಬಾಸ್ಟನ್: ಪ್ರವಾಸಿ ಭಾರತ ವಿರುದ್ಧ ಬುಧವಾರದಿಂದ (ಜುಲೈ 2) ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದೆ.
ಮೊದಲ ಪಂದ್ಯ ವಿಜೇತ ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲ್ಲಿದೆ.
ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದಲ್ಲಿ ಜೋಫ್ರಾ ಆರ್ಚರ್ ಅವರನ್ನು ಹೆಸರಿಸಲಾಗಿತ್ತು. ಆದರೆ ಮೊದಲ ಪಂದ್ಯ ವಿಜೇತ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಇಂತಿದೆ:
ಜಾಕ್ ಕ್ರಾಲಿ,
ಬೆನ್ ಡಕೆಟ್,
ಓಲಿ ಪೋಪ್,
ಜೋ ರೂಟ್,
ಹ್ಯಾರಿ ಬ್ರೂಕ್,
ಬೆನ್ ಸೋಕ್ಸ್ (ನಾಯಕ),
ಜೇಮಿ ಸ್ಮಿತ್ (ವಿಕೆಟ್ ಕೀಪರ್)
ಕ್ರಿಸ್ ವೋಕ್ಸ್,
ಬ್ರೈಡನ್ ಕಾರ್ಸ್,
ಜೋಶ್ ಟಂಗ್,
ಶೋಯಬ್ ಬಷೀರ್.
ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಕೊನೆಯ ಇನಿಂಗ್ಸ್‌ನಲ್ಲಿ 371 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿತ್ತು. ಆ ಮೂಲಕ ಚೊಚ್ಚಲ ನಾಯಕತ್ವದಲ್ಲೇ ಶುಭಮನ್ ಗಿಲ್ ನಿರಾಸೆ ಅನುಭವಿಸಿದ್ದರು. ಭಾರತದ ಪರ ಐದು ಶತಕಗಳು ದಾಖಲಾದರೂ ಗೆಲುವು ದಕ್ಕಲಿಲ್ಲ. ರಿಷಭ್ ಪಂತ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು. ನಾಯಕ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್.ರಾಹುಲ್ ಸಹ ಶತಕ ಗಳಿಸಿದ್ದರು.
ಭಾರತ ತಂಡದಲ್ಲಿ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ಸೂಚಿಸುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.