ADVERTISEMENT

IND vs ENG 4th Test: ಗಾಯದ ನಡುವೆಯೂ ವಿಶಿಷ್ಟ ದಾಖಲೆ ಬರೆದ ಪಂತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2025, 6:42 IST
Last Updated 24 ಜುಲೈ 2025, 6:42 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

(ಪಿಟಿಐ ಚಿತ್ರ)

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿರುವ ಟೀಮ್ ಇಂಡಿಯಾ ತಾರೆ ರಿಷಭ್ ಪಂತ್, ಈ ಪಂದ್ಯಕ್ಕೆ ಲಭ್ಯರಾಗುವರೇ ಎಂಬುದರ ಕುರಿತು ಆತಂಕ ಮೂಡಿದೆ.

ADVERTISEMENT

48 ಎಸೆತಗಳಲ್ಲಿ 37 ರನ್‌ ಗಳಿಸಿದ ರಿಷಭ್ ಅವರು ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಹಾಕಿದ ಯಾರ್ಕರ್ ಎಸೆತದಲ್ಲಿ ಗಾಯಗೊಂಡು ಪೆವಿಲಿಯನ್ ಮರಳಿದರು.

ಈ ನಡುವೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಹಸ್ರ ರನ್ ಪೂರ್ಣಗೊಳಿಸಿರುವ ರಿಷಭ್, ನೂತನ ದಾಖಲೆ ಬರೆದಿದ್ದಾರೆ.

ತವರಿನಾಚೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ಕೀರ್ತಿಗೆ ಪಂತ್ ಭಾಜನರಾಗಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ವಿಕೆಟ್ ಕೀಪರ್‌ಗಳ ಪಟ್ಟಿ:

  • ರಿಷಭ್ ಪಂತ್ (ಭಾರತ): 1,000*

  • ಮಹೇಂದ್ರ ಸಿಂಗ್ ಧೋನಿ (ಭಾರತ): 778

  • ರಾಡ್ ಮಾರ್ಷ್ (ಆಸ್ಟ್ರೇಲಿಯಾ): 773

  • ಜಾನ್ ವೈಟ್ (ದ.ಆಫ್ರಿಕಾ): 684

  • ಇಯಾನ್ ಹೀಲಿ (ಆಸ್ಟ್ರೇಲಿಯಾ): 624

ಪಂತ್ ಅವರು ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಸ್ಕ್ಯಾನ್‌ ವರದಿ ಇನ್ನಷ್ಟೇ ಬರಬೇಕಿದೆ.

ಲಾರ್ಡ್ಸ್‌ ಟೆಸ್ಟ್‌ನಲ್ಲಿಯೂ ಅವರು ವಿಕೆಟ್‌ಕೀಪಿಂಗ್ ಮಾಡುವಾಗ ಗಾಯಗೊಂಡಿದ್ದರು. ಧ್ರುವ್ ಜುರೇಲ್ ಅವರು ಕೀಪಿಂಗ್ ನಿರ್ವಹಿಸಿದ್ದರು.

ಇನ್ನು ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌‍ನಲ್ಲಿ ಸಾವಿರ ರನ್ ಗಳಿಸಿರುವ ಭಾರತೀಯ ದಿಗ್ಗಜರಾದ ಸಚಿನ್ ತೆಂಡೂಲ್ಕರ್ (1,575), ರಾಹುಲ್ ದ್ರಾವಿಡ್ (1,375), ಸುನಿಲ್ ಗವಾಸ್ಕರ್ (1,152), ವಿರಾಟ್ ಕೊಹ್ಲಿ (1,096) ಮತ್ತು ಕೆ.ಎಲ್. ರಾಹುಲ್ (1,035) ಸಾಲಿನಲ್ಲಿ ಪಂತ್ ಗುರುತಿಸಿಕೊಂಡಿದ್ದಾರೆ.

ರಿಷಭ್ ಪಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.