ಕೆ.ಎಲ್. ರಾಹುಲ್
(ರಾಯಿಟರ್ಸ್ ಚಿತ್ರ)
ಲೀಡ್ಸ್: ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್, ಆಂಗ್ಲರ ಮಣ್ಣಿನಲ್ಲಿ ಮಗದೊಂದು ಶತಕದ ಸಾಧನೆ ಮಾಡಿದ್ದಾರೆ.
ಲೀಡ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಾಹುಲ್ ಶತಕ ಗಳಿಸಿದ್ದಾರೆ. ಆ ಮೂಲಕ ಆರಂಭಿಕನಾಗಿ ಇಂಗ್ಲೆಂಡ್ ನೆಲದಲ್ಲಿ ಮೂರನೇ ಶತಕ ಗಳಿಸಿದ್ದಾರೆ.
ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ಓಪನರ್ ಆಗಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದ್ದಾರೆ. ಈ ಸಾಲಿನಲ್ಲಿ ಭಾರತದ ದಿಗ್ಗಜರಾದ ರಾಹುಲ್ ದ್ರಾವಿಡ್, ವಿಜಯ್ ಮರ್ಚಂಟ್ ಹಾಗೂ ಸುನಿಲ್ ಗವಾಸ್ಕರ್ ದಾಖಲೆಗಳನ್ನು ಮುರಿದಿದ್ದಾರೆ.
ಓಪನರ್ ಆಗಿ ದ್ರಾವಿಡ್, ಮರ್ಚಂಟ್ ಹಾಗೂ ಗವಾಸ್ಕರ್ ತಲಾ ಎರಡು ಶತಕಗಳನ್ನು ಗಳಿಸಿದ್ದರು.
ಇನ್ನು SENA (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು 50+ ರನ್ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ವೀರೇಂದ್ರ ಸೆಹ್ವಾಗ್ (9) ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ (19) ಮುಂಚೂಣಿಯಲ್ಲಿದ್ದಾರೆ.
ಮೊದಲ ಇನಿಂಗ್ಸ್‌ನಲ್ಲಿ 42 ರನ್ ಗಳಿಸಿದ್ದ ರಾಹುಲ್, ಎರಡನೇ ಇನಿಂಗ್ಸ್‌ನಲ್ಲಿ ಶತಕ ಸಾಧನೆ ಮಾಡಿದರು. 247 ಎಸೆತಗಳಲ್ಲಿ 18 ಬೌಂಡರಿಗಳ ನೆರವಿನಿಂದ 137 ರನ್ ಗಳಿಸಿದರು.
ಕೆ.ಎಲ್. ರಾಹುಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.