ADVERTISEMENT

ಅಂ.ರಾ. ಕ್ರಿಕೆಟ್‌ನಲ್ಲಿ ವೇಗವಾಗಿ 23 ಸಾವಿರ ರನ್; ಸಚಿನ್ ದಾಖಲೆ ಮುರಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 14:38 IST
Last Updated 2 ಸೆಪ್ಟೆಂಬರ್ 2021, 14:38 IST
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ   

ಸದ್ಯ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ23 ಸಾವಿರ ರನ್‌ ಗಳಿಸಿದ ಆಟಗಾರ ಎಂಬಶ್ರೇಯಕ್ಕೆ ಭಾಜನರಾಗಿದ್ದಾರೆ.

ಕೊಹ್ಲಿ,ಕ್ರಿಕೆಟ್‌ನ ಮೂರೂ(ಟೆಸ್ಟ್‌, ಏಕದಿನ ಮತ್ತು ಟಿ20) ಮಾದರಿಗಳಿಂದ ಇದುವರೆಗೆ ಒಟ್ಟು490 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಕೇವಲಏಳು ಮಂದಿಯಷ್ಟೇ23 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ, ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ520ಕ್ಕಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.

ವೇಗವಾಗಿ ಈ ದಾಖಲೆಮಾಡಿದ ಶ್ರೇಯ ಇದುವರೆಗೆ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿತ್ತು. ಅವರು 522 ಇನಿಂಗ್ಸ್‌ಗಳಲ್ಲಿ ಇಷ್ಟು ರನ್‌ ಗಳಿಸಿದ್ದರು.

ADVERTISEMENT

ಸಚಿನ್‌, ಕೊಹ್ಲಿ ಹೊರತುಪಡಿಸಿಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌, ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ, ಭಾರತದ ರಾಹುಲ್‌ ದ್ರಾವಿಡ್‌ ಮತ್ತು ಶ್ರೀಲಂಕಾದ ಮತ್ತೊಬ್ಬ ಬ್ಯಾಟ್ಸ್‌ಮನ್‌ ಮಹೇಲ ಜಯವರ್ಧನೆ23 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ.

ವೇಗವಾಗಿ23 ಸಾವಿರ ರನ್‌ ಗಳಿಸಿದವರು

ಸಂಖ್ಯೆ ಆಟಗಾರ ದೇಶ ಇನಿಂಗ್ಸ್‌
01. ವಿರಾಟ್‌ ಕೊಹ್ಲಿ ಭಾರತ 490
02. ಸಚಿನ್‌ ತೆಂಡೂಲ್ಕರ್‌ ಭಾರತ 522
03. ರಿಕಿ ಪಾಂಟಿಂಗ್‌ ಆಸ್ಟ್ರೇಲಿಯಾ 544
04. ಜಾಕ್‌ ಕಾಲಿಸ್‌ ದಕ್ಷಿಣ ಆಫ್ರಿಕಾ 551
05. ಕುಮಾರ ಸಂಗಕ್ಕಾರ ಶ್ರೀಲಂಕಾ 568
06. ರಾಹುಲ್‌ ದ್ರಾವಿಡ್ ಭಾರತ 576
07. ಮಹೇಲ ಜಯವರ್ಧನೆ ಶ್ರೀಲಂಕಾ 645

ಭಾರತ ಬ್ಯಾಟಿಂಗ್‌ಗೆ ಕೊಹ್ಲಿ ಬಲ
ಭಾರತವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಬ್ಯಾಟಿಂಗ್‌ ಆರಂಭಿಸಿರುವ ಭಾರತಕ್ಕೆ ಅಗ್ರ ಕ್ರಮಾಂಕದಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ (11) ಮತ್ತು ಕೆ.ಎಲ್‌. ರಾಹುಲ್‌ (17) ತಂಡದ ಮೊತ್ತ28 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಬಳಿಕ ಬಂದ ಚೇತೇಶ್ವರ ಪೂಜಾರ (4) ಮತ್ತು ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ (10) ನಿರಾಸೆ ಮೂಡಿಸಿದರು. ಹೀಗಾಗಿತಂಡದ ಮೊತ್ತ69 ರನ್‌ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳು ಪತನವಾಗಿದ್ದವು.

ಈ ವೇಳೆ ಜೊತೆಯಾಗಿರುವ ನಾಯಕ ಕೊಹ್ಲಿ (50) ಮತ್ತು ಉಪನಾಯಕ ಅಜಿಂಕ್ಯ ರಹಾನೆ (5) ತಂಡಕ್ಕೆ ಆಸರೆಯಾಗಿದ್ದಾರೆ.ಇವರಿಬ್ಬರು ಐದನೇ ವಿಕೆಟ್‌ ಜೊತೆಯಾಟದಲ್ಲಿ 45 ಸೇರಿಸಿದ್ದಾರೆ.

ತಂಡದ ಮೊತ್ತ ನಾಲ್ಕು ವಿಕೆಟ್‌ಗೆ 105 ರನ್‌ ಆಗಿದ್ದು ರಹಾನೆ, ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.