IND vs ZIM
ಹರಾರೆ: ಜಿಂಬಾಬ್ವೆ ವಿರುದ್ಧ ಭಾರತ 42 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು.
ಭಾರತ ಮತ್ತು ಜಿಂಬಾಬ್ವೆ ನಡುವಿನ ಕೊನೆಯ ಟಿ20 ಪಂದ್ಯ ಇಲ್ಲಿನ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಿತು.
ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಮೊದಲು ಬ್ಯಾಟಿಂಗ್ ಮಾಡಿತು.
20 ಓವರ್‌ಗಳಲ್ಲಿ ಭಾರತ 6 ವಿಕೆಟ್ ಕಳೆದುಕೊಂಡು 167 ರನ್ ಪೇರಿಸಿತು. ಸಂಜು 58, ದುಬೆ 26, ಪರಾಗ್ 22 ರನ್ ಹೊಡೆದರು. ಜಿಂಬಾಬ್ವೆ ಪರ ಮುಜರಬನಿ 2 ವಿಕೆಟ್ ಪಡೆದರು.
ಈ ಗುರಿಯನ್ನ ಬೆನ್ನತ್ತಿದ ಜಿಂಬಾಬ್ವೆ 18.3 ಓವರ್‌ಗಳಲ್ಲಿ 125 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಜಿಂಬಾಬ್ವೆ ಪರ ಮೇಯರ್ 34, ಮರುಮನಿ ಹಾಗೂ ಫರಾಜ್ ತಲಾ 27 ರನ್ ಸಿಡಿಸಿ ಗಮನ ಸೆಳೆದರು. ಭಾರತದ ಪರ ಮುಕೇಶ್ ಕುಮಾರ್ 4, ಸುಂದರ್ 2 ವಿಕೆಟ್ ಪಡೆದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ನಾಲ್ಕರಲ್ಲಿ ಜಯ ಸಾಧಿಸಿದರೆ, ಜಿಂಬಾಬ್ವೆ ಕೇವಲ ಒಂದು ಪಂದ್ಯವನ್ನು ಮಾತ್ರ ಜಯ ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.