ADVERTISEMENT

ಐಸಿಸಿ ಟಿ20 ರ‍್ಯಾಂಕಿಂಗ್: ಭಾರತದ ವನಿತೆಯರಿಗೆ ಮೂರನೇ ಸ್ಥಾನ

ಪಿಟಿಐ
Published 2 ಅಕ್ಟೋಬರ್ 2020, 18:27 IST
Last Updated 2 ಅಕ್ಟೋಬರ್ 2020, 18:27 IST
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಕೋಚ್ ಡಬ್ಲ್ಯು. ವಿ. ರಾಮನ್  –ಎಎಫ್‌ಪಿ ಚಿತ್ರ
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಕೋಚ್ ಡಬ್ಲ್ಯು. ವಿ. ರಾಮನ್  –ಎಎಫ್‌ಪಿ ಚಿತ್ರ   

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದೆ.

ಈ ಹಾದಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿರುವ ಭಾರತದ ವನಿತೆಯರು, ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಟಿ20 ವಿಭಾಗದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಭಾರತ 270 ಮತ್ತು ನ್ಯೂಜಿಲೆಂಡ್ 269 ಅಂಕಗಳನ್ನು ಗಳಿಸಿವೆ. ಭಾರತ ತಂಡವು ಈ ಬಾರಿಯ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಫೈನಲ್ ತಲುಪಿತ್ತು.

ADVERTISEMENT

ಈ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬ್ರೆಜಿಲ್ ತಂಡವು 11 ಸ್ಥಾನಗಳ ಬಡ್ತಿಯೊಂದಿಗೆ 27ನೇ ಸ್ಥಾನಕ್ಕೆ ಬಂದಿದೆ. ಆದರೆ ಮಲೇಷ್ಯಾ 38ನೇ ಸ್ಥಾನಕ್ಕೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.