ADVERTISEMENT

ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಭಾರತ ಕ್ರಿಕೆಟ್ ಸರಣಿ

ಪಿಟಿಐ
Published 24 ಜುಲೈ 2025, 15:24 IST
Last Updated 24 ಜುಲೈ 2025, 15:24 IST
ಬೆನ್ ಸ್ಟೋಕ್ಸ್ 
ಬೆನ್ ಸ್ಟೋಕ್ಸ್    

ಮ್ಯಾಂಚೆಸ್ಟರ್: ಭಾರತ ಕ್ರಿಕೆಟ್ ತಂಡವು ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ಆಡಲಿದೆ. 

ಟಿ20 ಸರಣಿಯ ಪಂದ್ಯಗಳು ಡುರಾಮ್ (ಜುಲೈ 1), ಮ್ಯಾಂಚೆಸ್ಟರ್ (ಜುಲೈ 4), ನಾಟಿಂಗ್‌ಹ್ಯಾಮ್ (ಜುಲೈ 7), ಬ್ರಿಸ್ಟಲ್ (ಜುಲೈ 9) ಮತ್ತು ಸೌತಾಂಪ್ಟನ್ (ಜುಲೈ 11) ಕ್ರೀಡಾಂಗಣಗಳಲ್ಲಿ ನಡೆಯಲಿವೆ. 

ಏಕದಿನ ಸರಣಿಯ ಪಂದ್ಯಗಳು ಬರ್ಮಿಂಗ್‌ಹ್ಯಾಮ್ (ಜುಲೈ 14), ಕಾರ್ಡಿಫ್ (ಜುಲೈ 16) ಮತ್ತು ಲಾರ್ಡ್ಸ್‌ (ಜುಲೈ 19) ಕ್ರೀಡಾಂಗಣದಲ್ಲಿ ನಡೆಯಲಿವೆ. 

ADVERTISEMENT

‘2026ರ ಬೇಸಿಗೆಯಲ್ಲಿ ಅಮೋಘವಾದ ಅಂತರರಾಷ್ಟ್ರೀಯ ಕ್ರಿಕೆಟ್ ನಡೆಯಲಿದೆ. ಈ ಪಂದ್ಯಗಳಲ್ಲಿ ಆಡಲು ನಾವು ಉತ್ಸುಕರಾಗಿದ್ದೇವೆ. ವಿಶ್ವದರ್ಜೆಯ ತಂಡಗಳು ಐತಿಹಾಸಿಕ ತಾಣಗಳಲ್ಲಿ ಆಡಲಿವೆ. ಅಭಿಮಾನಿಗಳಿಗೆ ಪುರುಷ ಮತ್ತು ಮಹಿಳಾ ಕ್ರಿಕೆಟ್‌ನ ಉತ್ತಮ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ’ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿಚರ್ಡ್ ಗೌಲ್ಡ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇದೇ ಋತುವಿನಲ್ಲಿ ನ್ಯೂಜಿಲೆಂಡ್ , ಪಾಕಿಸ್ತಾನ ಎದುರಿನ ಸರಣಿಗಳು ಹಾಗೂ ಶ್ರೀಲಂಕಾ ಎದುರಿನ ಏಕದಿನ ಸರಣಿಗೂ ಇಸಿಬಿ ಆತಿಥ್ಯ ವಹಿಸಲಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಬೆನ್ ಸ್ಟೋಕ್ಸ್ ಮತ್ತು ಏಕದಿನ ತಂಡಕ್ಕೆ ಹ್ಯಾರಿ ಬ್ರೂಕ್ ನಾಯಕತ್ವ ವಹಿಸುವುದು ಬಹುತೇಕ ಖಚಿತವಾಗಿದೆ.

ಮಹಿಳೆಯರಿಗೆ ಏಕೈಕ ಟೆಸ್ಟ್

ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಭಾರತ ಮಹಿಳಾ ತಂಡವು ಮೂರು ಟಿ20 ಪಂದ್ಯಗಳ ಸರಣಿ ಮತ್ತು ಏಕೈಕ ಟೆಸ್ಟ್ ನಡೆಯಲಿದೆ.  ಟಿ20 ಸರಣಿಯ ಪಂದ್ಯಗಳೂ ಚೆಲ್ಮ್ಸ್‌ಫೋರ್ಡ್ (ಮೇ 28) ಬ್ರಿಸ್ಟಲ್ (ಮೇ 30) ಮತ್ತು ಟಾಂಟನ್ (ಜೂನ್ 2) ಕ್ರೀಡಾಂಗಣಗಳಲ್ಲಿ ನಡೆಯಲಿವೆ.   ಏಕೈಕ ಟೆಸ್ಟ್ ಪಂದ್ಯವು ಜುಲೈ 10ರಿಂದ ಲಾರ್ಡ್ಸ್‌ನಲ್ಲಿ ಆಯೋಜನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.