ADVERTISEMENT

ಟಿ20 ವಿಶ್ವಕಪ್‌ಗೆ ಸ್ಯಾಟ್ಲೆಂಡ್ ತಂಡ ಪ್ರಕಟ: ಅಫ್ಗನ್ ಮೂಲದ ಜೈನುಲ್ಲಾಗೆ ಸ್ಥಾನ

ಪಿಟಿಐ
Published 27 ಜನವರಿ 2026, 16:16 IST
Last Updated 27 ಜನವರಿ 2026, 16:16 IST
ರಿಚಿ ಬೆರಿಂಗ್ಟನ್
ರಿಚಿ ಬೆರಿಂಗ್ಟನ್   

ಎಡಿನ್‌ಬರ್ಗ್: ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯುವ ಐಸಿಸಿ ಟಿ20 ಟೂರ್ನಿಗೆ ಕೊನೆಯ ಕ್ಷಣದಲ್ಲಿ ಅವಕಾಶ ಪಡೆದ ಸ್ಕಾಟ್ಲೆಂಡ್‌ ತಂಡವು 15 ಆಟಗಾರರ ತಂಡವನ್ನು ಪ್ರಕಟಿಸಿದೆ. ಅಫ್ಘಾನಿಸ್ತಾನ ಮೂಲದ ವೇಗಿ ಜೈನುಲ್ಲಾ ಇಹ್ಸಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಭದ್ರತಾ ಕಾಳಜಿಯನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನಿಂದ ಹಿಂದೆ ಸರಿದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ಕಲ್ಪಿಸಿದೆ. ಫೆ.7ರಂದು ಕೋಲ್ಕತ್ತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್ ತನ್ನ ಅಭಿಯಾನವನ್ನು ಆರಂಭಿಸಲಿದೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ 2024ರ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಹನ್ನೊಂದು ಮಂದಿ ಮತ್ತೆ ಅವಕಾಶ ಪಡೆದಿದ್ದಾರೆ. ಇಹ್ಸಾನ್ ಅವರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿಚಿ ಬೆರಿಂಗ್ಟನ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. 

ADVERTISEMENT

ಟಾಮ್ ಬ್ರೂಸ್, ಫಿನ್ಲೆ ಮೆಕ್‌ಕ್ರೀತ್ ಮತ್ತು ಆಲಿವರ್ ಡೇವಿಡ್ಸನ್ ಅವರಿಗೆ ಇದು ಮೊದಲ ವಿಶ್ವಕಪ್‌ ಟೂರ್ನಿಯಾಗಿದೆ. ಪಾಕಿಸ್ತಾನ ಮೂಲದ ಸಫ್ಯಾನ್ ಷರೀಫ್ ಅವರು ತಂಡದಲ್ಲಿದ್ದು, ಅವರ ವೀಸಾ ಅರ್ಜಿಯು ಹೆಚ್ಚಿನ ಪರಿಶೀಲನೆಗೆ ಒಳಗಾಗಲಿದೆ.

ಸ್ಕಾಟ್ಲೆಂಡ್‌ ತಂಡವು ಸಿ ಗುಂಪಿನಲ್ಲಿ ಇಟಲಿ, ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌ ಮತ್ತು ನೇಪಾಳ ತಂಡಗಳೊಂದಿಗೆ ಸ್ಥಾನ ಪಡೆದಿದೆ. 

ತಂಡ: ರಿಚಿ ಬೆರಿಂಗ್ಟನ್ (ನಾಯಕ), ಟಾಮ್‌ ಬ್ರೂಸ್‌, ಮ್ಯಾಥ್ಯೂ ಕ್ರಾಸ್‌, ಬ್ರಾಡ್ಲಿ ಕ್ಯೂರಿ, ಆಲಿವರ್ ಡೇವಿಡ್‌ಸನ್, ಕ್ರಿಸ್ ಗ್ರೀವ್ಸ್, ಜೈನುಲ್ಲಾ ಇಹ್ಸಾನ್, ಮೈಕೆಲ್ ಜೋನ್ಸ್, ಮೈಕೆಲ್ ಲೀಸ್ಕ್, ಫಿನ್ಲೆ ಮೆಕ್‌ಕ್ರೀತ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮುನ್ಸೆ, ಸಫ್ಯಾನ್ ಷರೀಫ್, ಮಾರ್ಕ್ ವ್ಯಾಟ್, ಬ್ರಾಡ್ಲಿ ವೀಲ್

ಪ್ರಯಾಣ ಮೀಸಲು ಆಟಗಾರರು: ಜಾಸ್ಪರ್ ಡೇವಿಡ್ಸನ್, ಜ್ಯಾಕ್ ಜಾರ್ವಿಸ್

ಪ್ರಯಾಣೇತರ ಮೀಸಲು ಆಟಗಾರರು: ಮ್ಯಾಕೆಂಜಿ ಜೋನ್ಸ್, ಕ್ರಿಸ್ ಮೆಕ್‌ಬ್ರೈಡ್, ಚಾರ್ಲಿ ಟಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.