ADVERTISEMENT

2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿ: ಭಾರತಕ್ಕೆ ಪಾಕ್‌ ಮೊದಲ ಎದುರಾಳಿ

ಪಿಟಿಐ
Published 19 ಜೂನ್ 2025, 23:30 IST
Last Updated 19 ಜೂನ್ 2025, 23:30 IST
ಟಿ20 ವಿಶ್ವಕಪ್‌
ಟಿ20 ವಿಶ್ವಕಪ್‌   

ದುಬೈ: ಭಾರತದ ತಂಡವು 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹಾಗೂ ಆತಿಥೇಯ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಬುಧವಾರ 12 ತಂಡಗಳನ್ನು ಒಳಗೊಂಡ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಟೂರ್ನಿಯು 2026ರ ಜೂನ್ 12ರಿಂದ ಜುಲೈ 5ರವರೆಗೆ ನಡೆಯಲಿದೆ. ಇಂಗ್ಲೆಂಡ್‌ನ ಏಳು ತಾಣಗಳಲ್ಲಿ ಒಟ್ಟು 33 ಪಂದ್ಯಗಳು ಆಯೋಜನೆಗೊಳ್ಳಲಿವೆ. 

ADVERTISEMENT

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಜೂನ್ 14ರಂದು ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಆತಿಥೇಯ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಜೂನ್ 12ರಂದು ಉದ್ಘಾಟನಾ ಪಂದ್ಯ ನಡೆಯಲಿದೆ.

ಭಾರತ ತಂಡದ ವೇಳಾಪಟ್ಟಿ

ದಿನಾಂಕ;ಎದುರಾಳಿ;ತಾಣ ಜೂನ್‌ 14;ಪಾಕಿಸ್ತಾನ;ಬರ್ಮಿಂಗ್‌ಹ್ಯಾಮ್‌ ಜೂನ್‌ 17;ಕ್ವಾಲಿಫೈಯರ್;ಲೀಡ್ಸ್‌ ಜೂನ್‌ 21;ದಕ್ಷಿಣ ಆಫ್ರಿಕಾ;ಮ್ಯಾಂಚೆಸ್ಟರ್ ಜೂನ್‌ 25;ಕ್ವಾಲಿಫೈಯರ್‌;ಮ್ಯಾಂಚೆಸ್ಟರ್ ಜೂನ್‌ 28;ಆಸ್ಟ್ರೇಲಿಯಾ;ಲಾರ್ಡ್ಸ್‌ = ಜೂನ್‌ 30;ಸೆಮಿಫೈನಲ್‌ 1;ಓವಲ್‌ ಜುಲೈ 2;ಸೆಮಿಫೈನಲ್‌ 2;ಓವಲ್‌ ಜುಲೈ 5;ಫೈನಲ್‌;ಲಾರ್ಡ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.