ADVERTISEMENT

ಭಾರತೆ ಎ – ಆಸ್ಟ್ರೇಲಿಯಾ ಎ ಪಂದ್ಯ ಇಂದು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:55 IST
Last Updated 5 ಡಿಸೆಂಬರ್ 2020, 15:55 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ಸಿಡ್ನಿ(ಪಿಟಿಐ): ಇದೇ ತಿಂಗಳು ಆರಂಭವಾಗಲಿರುವ ಟೆಸ್ಟ್ ಸರಣಿಯ ಪೂರ್ವಸಿದ್ಧತೆಗಾಗಿ ಭಾರತ ’ಎ‘ ಹಾಗೂ ಆಸ್ಟ್ರೇಲಿಯಾ ’ಎ‘ ತಂಡಗಳ ಅಭ್ಯಾಸ ಪಂದ್ಯವು ಭಾನುವಾರ ಆರಂಭವಾಗಲಿದೆ.

ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ಟಿ20 ಪಂದ್ಯ ನಡೆಯಲಿದೆ. ಆ ಬಳಗದಲ್ಲಿ ಇರದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಕನ್ನಡಿಗ ಮಯಂಕ್ ಅಗರವಾಲ್ ಆರಂಭಿಕ ಬ್ಯಾಟ್ಸ್‌ಮನ್ ಆಗುವ ಸಾಧ್ಯತೆ ಇದೆ. ಅವರೊಂದಿಗೆ ಶುಭಮನ್ ಗಿಲ್ ಅಥವಾ ಪೃಥ್ವಿ ಶಾ ಅವರಲ್ಲಿ ಒಬ್ಬರು ಕಣಕ್ಕಿಳಿಯಬಹುದು. ವೃದ್ಧಿಮಾನ್ ಸಹಾ ಮತ್ತು ರಿಷಭ್ ಪಂತ್ ಅವರಲ್ಲಿ ಒಬ್ಬರು ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಬಹುದು. ಐಪಿಎಲ್ ಸಂದರ್ಭದಲ್ಲಿ ಸಹಾ ಸ್ನಾಯುಸೆಳೆತ ಅನುಭವಿಸಿದ್ದರು.

ADVERTISEMENT

ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಮತ್ತು ಹನುಮವಿಹಾರಿ ಆಡುವುದು ಖಚಿತ. ಆರ್. ಅಶ್ವಿನ್, ಕುಲದೀಪ್ ಯಾದವ್ ಕೂಡ ಆಡುವರು.

ಡಿಸೆಂಬರ್ 17ರಿಂದ ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.