ADVERTISEMENT

ಭಾರತದ ಆಟಗಾರರಿಗೆ ಮಾನಸಿಕ ಸದೃಢತೆ ಬೇಕು: ಆಡಂ ಗಿಲ್‌ಕ್ರಿಸ್ಟ್‌

ಪಿಟಿಐ
Published 9 ಸೆಪ್ಟೆಂಬರ್ 2018, 15:48 IST
Last Updated 9 ಸೆಪ್ಟೆಂಬರ್ 2018, 15:48 IST
ಆಡಂ ಗಿಲ್‌ಕ್ರಿಸ್ಟ್‌
ಆಡಂ ಗಿಲ್‌ಕ್ರಿಸ್ಟ್‌   

ಬೆಂಗಳೂರು: ‘ವಿದೇಶಗಳಲ್ಲಿ ಟೆಸ್ಟ್‌ ಪಂದ್ಯಗಳನ್ನು ಗೆಲ್ಲಲು ಭಾರತ ಕ್ರಿಕೆಟ್‌ ತಂಡದ ಆಟಗಾರರಿಗೆ ಮಾನಸಿಕ ಸದೃಢತೆ ಅಗತ್ಯವಿದೆ’ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಆಡಂ ಗಿಲ್‌ಕ್ರಿಸ್ಟ್‌ ಹೇಳಿದ್ದಾರೆ.

ಇಲ್ಲಿ ನಡೆದ ಪುಮಾ ಕಂಪನಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದೇಶಗಳ ಪಿಚ್‌ಗಳಲ್ಲಿ ಆಡುವುದು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ.ಭಾರತ ತಂಡದಲ್ಲಿ ಗುಣಮಟ್ಟದ ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ಗಳಿದ್ದಾರೆ. ಜಗತ್ತಿನ ಶ್ರೇಷ್ಠ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಅವರ ಬಲ ತಂಡಕ್ಕಿದೆ. ಪಂದ್ಯಗಳನ್ನು ಗೆಲ್ಲುವ ಎಲ್ಲ ಸಾಮರ್ಥ್ಯ ತಂಡಕ್ಕಿದೆ’ ಎಂದು ಗಿಲ್‌ಕ್ರಿಸ್ಟ್‌ ಹೇಳಿದ್ದಾರೆ.

ADVERTISEMENT

‘ಕೊಹ್ಲಿ ಒಬ್ಬ ಉತ್ತಮ ನಾಯಕ. ಸೋಲಿನ ನಡುವೆಯೂ ತಂಡದ ಇತರ ಆಟಗಾರರನ್ನು ಹುರಿದುಂಬಿಸುತ್ತಾರೆ. ಅವರಲ್ಲಿನ ಉತ್ತಮ ಆಟ ಹೊರಬರಲು‌ಅನುವು ಮಾಡಿಕೊಡುತ್ತಾರೆ. ತಂಡದ ಬೆಳವಣಿಗೆಯ ದೃಷ್ಟಿಯಿಂದ ಅದು ಮುಖ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್‌ ಪಂದ್ಯಗಳ ಸರಣಿ ಈಗಾಗಲೇ ಕಳೆದುಕೊಂಡಿದೆ. ಸದ್ಯ, ಸರಣಿಯ ಕೊನೆಯ ಟೆಸ್ಟ್‌ ಪಂದ್ಯ ಕೆನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿದೆ.

ಭಾರತ ತಂಡವು ನವೆಂಬರ್‌ನಿಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳು ನಾಲ್ಕು ಟೆಸ್ಟ್‌, ಮೂರು ಟ್ವೆಂಟಿ–20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗಳನ್ನು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.