ADVERTISEMENT

IND vs SA 5th T20I: ಭಾರತದ ಬ್ಯಾಟಿಂಗ್ ಅಬ್ಬರ: ಹರಿಣಗಳಿಗೆ 232 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 13:18 IST
Last Updated 19 ಡಿಸೆಂಬರ್ 2025, 13:18 IST
   

ಅಹಮದಾಬಾದ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 5 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 231 ರನ್‌ ಗಳಿಸಿದೆ.

ದಕ್ಷಿಣ ಆಫ್ರಿಕಾ ತಂಡವು ಈ ಪಂದ್ಯ ಗೆದ್ದು, ಸರಣಿ ಸಮಬಲಗೊಳಿಸಲು 232 ರನ್‌ ಗಳಿಸಬೇಕಿದೆ.

ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 21 ಎಸೆತದಲ್ಲಿ 34 ರನ್‌ (6 ಬೌಂಡರಿ ಹಾಗೂ 1 ಸಿಕ್ಸರ್) ಹಾಗೂ ಸಂಜು ಸ್ಯಾಮ್ಸನ್ 22 ಎಸೆತದಲ್ಲಿ 37 ರನ್‌ (4 ಬೌಂಡರಿ ಹಾಗೂ 2 ಸಿಕ್ಸರ್) ಸಿಡಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು.

ADVERTISEMENT

ನಾಯಕ ಸೂರ್ಯಕುಮಾರ್ ಯಾದವ್‌ 7 ಎಸೆತಗಳಲ್ಲಿ 5 ರನ್ ಗಳಿಸುವ ಮೂಲಕ ಮತ್ತೆ ವೈಫಲ್ಯ ಅನುಭವಿಸಿದರು.

ತಿಲಕ್‌ ವರ್ಮಾ 42 ಎಸೆತದಲ್ಲಿ 73 ರನ್‌ (10 ಬೌಂಡರಿ ಹಾಗೂ 1 ಸಿಕ್ಸರ್) ಹಾಗೂ ಹಾರ್ದಿಕ್‌ ಪಾಂಡ್ಯ 25 ಎಸೆತದಲ್ಲಿ 63 ರನ್‌ ( 5 ಬೌಂಡರಿ ಹಾಗೂ 5 ಸಿಕ್ಸರ್) ಸ್ಪೋಟಕ ಆಟವಾಡುವ ಮೂಲಕ ತಂಡದ ಮೊತ್ತವನ್ನು 200 ರನ್‌ ಗಡಿ ದಾಟಿಸಿದರು.

ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2–1ರಲ್ಲಿ ಮುಂದಿದ್ದು, ಕೊನೆಯ ಪಂದ್ಯ ಗೆಲ್ಲುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಗುರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.