ADVERTISEMENT

ಯುವ ಏಕದಿನ ಸರಣಿ: ಭಾರತ ತಂಡದಿಂದ ಕ್ಲೀನ್‌ಸ್ವೀಪ್

ಪಿಟಿಐ
Published 26 ಸೆಪ್ಟೆಂಬರ್ 2025, 13:52 IST
Last Updated 26 ಸೆಪ್ಟೆಂಬರ್ 2025, 13:52 IST
   

ಬ್ರಿಸ್ಬೇನ್: ಬ್ಯಾಟರ್‌ಗಳಾದ ವೇದಾಂತ ತ್ರಿವೇದಿ ಮತ್ತು ರಾಹುಲ್ ಕುಮಾರ್ ಅವರ ಅರ್ಧ ಶತಕಗಳು ಮತ್ತು ಎಡಗೈ ಸ್ಪಿನ್ನರ್ ಖಿಲಾನ್ ಪಟೇಲ್ (26ಕ್ಕೆ4) ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 167 ರನ್‌ಗಳ ಭಾರಿ ಅಂತರದಿಂದ ಸೋಲಿಸಿತು.

ಭಾರತ ತಂಡ ಸರಣಿಯನ್ನು 3–0 ಅಂತರದಿಂದ ಗೆದ್ದು ಕ್ಲೀನ್‌ಸ್ಲೀಪ್‌ ಮಾಡಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಭಾರತ 9 ವಿಕೆಟ್‌ಗೆ 280 ರನ್‌ಗಳ ಸವಾಲಿನ ಮೊತ್ತ ಗಳಿಸಿತು. ವೇದಾಂತ್ (86, 92ಎ, 4x8) ಮತ್ತು ರಾಹುಲ್ (62, 84ಎ, 4x6) ಅವರ ಆಟ ಇದಕ್ಕೆ ಪ್ರಮುಖ ಕಾರಣವಾಯಿತು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 99 ರನ್ ಸೇರಿಸಿದರು.

ADVERTISEMENT

ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. 39 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಹೆಚ್ಚಿನ ಚೇತರಿಕೆ ಕಾಣದೇ 28.3 ಓವರುಗಳಲ್ಲಿ 113 ರನ್‌ಗಳಿಗೆ ಉರುಳಿತು. ಮಧ್ಯಮ ಕ್ರಮಾಂಕದ ಕುಸಿತಕ್ಕೆ ಕಾರಣರಾದ ಖಿಲಾನ್‌ ಅವರಿಗೆ ಎಡಗೈ ವೇಗಿ ಉಧವ್ ಮೋಹನ್ (26ಕ್ಕೆ3) ಬೆಂಬಲ ನೀಡಿದರು.

ಸಂಕ್ಷಿಪ್ತ ಸ್ಕೋರು:

ಭಾರತ ಅಂಡರ್‌ 19 ತಂಡ: 50 ಓವರುಗಳಲ್ಲಿ 9 ವಿಕೆಟ್‌ಗೆ 280 (ವಿಹಾನ್ ಮಲ್ಹೋತ್ರಾ 40, ವೇದಾಂತ್ ತ್ರಿವೇದಿ 86, ರಾಹುಲ್ ಕುಮಾರ್ 62; ಕೇಸಿ ಬರ್ಟನ್ 39ಕ್ಕೆ3)

ಆಸ್ಟ್ರೇಲಿಯಾ ಅಂಡರ್19 ತಂಡ: 28.3 ಓವರುಗಳಲ್ಲಿ 113 (ಅಲೆಕ್ಸ್ ಟರ್ನರ್ 32, ಟಾಮ್‌ ಹೋಗನ್ 28; ಉದಯ್ ಮೋಹನ್ 26ಕ್ಕೆ3, ಖಿಲಾನ್ ಪಟೇಲ್ 26ಕ್ಕೆ4, ಕನಿಷ್ಕ್‌ ಚೌಹಾನ್ 18ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.