ADVERTISEMENT

ಭಾರತದ ವಿರುದ್ಧ ಆಡುವುದನ್ನು ನಾವು ಇಷ್ಟಪಡುತ್ತೇವೆ: ಆಸೀಸ್‌ ನಾಯಕ ಮಿಚೆಲ್ ಮಾರ್ಷ್

ಪಿಟಿಐ
Published 13 ಅಕ್ಟೋಬರ್ 2025, 7:54 IST
Last Updated 13 ಅಕ್ಟೋಬರ್ 2025, 7:54 IST
   

ಸಿಡ್ನಿ: ಭಾರತದ ವಿರುದ್ಧ ಕ್ರಿಕೆಟ್‌ ಆಡುವುದನ್ನು ನಾವು ಇಷ್ಟಪಡುತ್ತೇವೆ ಎಂದು ಆಸ್ಟ್ರೇಲಿಯಾ ಟಿ–20 ತಂಡದ ನಾಯಕ ಮಿಚೆಲ್‌ ಮಾರ್ಷ್‌ ಹೇಳಿದ್ದಾರೆ.

‘ಆಸ್ಟ್ರೇಲಿಯಾ ತಂಡವು ಮಾನಸಿಕವಾಗಿ ಆ್ಯಷಸ್‌ ಸರಣಿಗೆ ಸಿದ್ಧವಾಗುತ್ತಿದೆ. ಆದರೆ, ಭಾರತದ ವಿರುದ್ಧ ಆಡುವುದನ್ನು ನಾವೆಲ್ಲರೂ ಇಷ್ಟಪಡುತ್ತೇವೆ’ ಎಂದು ಹೇಳಿದ್ದಾರೆ.

ಕ್ರಿಕೆಟ್‌ ಅಂಗಳದಲ್ಲಿ ಭಾರತವು ನಮಗೆ ಅತ್ಯುತ್ತಮ ಪೈಪೋಟಿ ನೀಡುತ್ತಿದೆ. ಒಂದು ತಂಡವಾಗಿ ಬಲಾಢ್ಯವಾಗಿದೆ. ಆ್ಯಷಸ್‌ ಸರಣಿಗೂ ಮೊದಲು ಭಾರತದ ವಿರುದ್ಧ ಆಡುತ್ತಿರುವುದು, ಸರಿಯಾದ ಸಮಯವಾಗಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ.

ADVERTISEMENT

ಅ.19 ರಿಂದ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಆರಂಭವಾಗಲಿದೆ. ನಂತರ 5 ಪಂದ್ಯಗಳ ಟಿ –20 ಸರಣಿ ಜರುಗಲಿದೆ. ಪ್ಯಾಟ್‌ ಕಮಿನ್ಸ್‌ ಅವರು ಗಾಯಗೊಂಡಿರುವುದರಿಂದ, ಮಿಚೆಲ್‌ ಮಾರ್ಷ್‌ ಅವರೇ ಏಕದಿನ ತಂಡವನ್ನೂ ಮುನ್ನಡೆಸಲಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರು ಫೆಬ್ರುವರಿ ನಂತರ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.