ADVERTISEMENT

IND vs ENG | 2ನೇ ಟಿ20: ಭಾರತಕ್ಕೆ 165 ರನ್ ಗೆಲುವಿನ ಗುರಿ ನೀಡಿದ ಇಂಗ್ಲೆಂಡ್ 

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 15:49 IST
Last Updated 14 ಮಾರ್ಚ್ 2021, 15:49 IST
   

ಅಹಮದಾಬಾದ್‌: ಇಲ್ಲಿ ನಡೆಯುತ್ತಿರುವ 2ನೇ ಟಿ–20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 165 ರನ್ ಗೆಲುವಿನ ಗುರಿ ನೀಡಿದೆ.

ಆರಂಭಿಕ ಆಟಗಾರ ಜೆಸನ್ ರಾಯ್ ಅವರ 46 ರನ್‌ಗಳ ನೆರವಿನಿಂದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿದೆ. ಉಳಿದಂತೆ ಡೇವಿಡ್ ಮಲನ್ 24, ಜಾನಿ ಬೇರ್ ಸ್ಟೋ 20, ಇಯಾನ್ ಮೋರ್ಗನ್ 28, ಬೆನ್ ಸ್ಟೋಕ್ಸ್ 24 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಅಂತ್ಯದಲ್ಲಿ ಇಂಗ್ಲೆಂಡ್ ಅಷ್ಟಾಗಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ 180ರ ಗಡಿ ದಾಟಬಹುದೆಂದುಕೊಂಡಿದ್ದ ಸ್ಕೋರ್ 160 ಗಡಿಯಲ್ಲೇ ನಿಂತಿತು.

ಭಾರತದ ಪರ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಉರುಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.