ADVERTISEMENT

India vs England 2nd Test| 364 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 13:59 IST
Last Updated 13 ಆಗಸ್ಟ್ 2021, 13:59 IST
ರವೀಂದ್ರ ಜಡೇಜಾ ಆಟ
ರವೀಂದ್ರ ಜಡೇಜಾ ಆಟ    

ಲಂಡನ್‌:ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಶುಕ್ರವಾರ364 ರನ್‌ಗಳಿಗೆ ಆಲೌಟ್‌ ಆಗಿದೆ.

ಭಾರತದ ಪರ ಕನ್ನಡಿಗ ಕೆ.ಎಲ್‌ ರಾಹುಲ್‌ 129 (250), ರೋಹಿತ್‌ ಶರ್ಮಾ 83 (145) ರನ್‌ಗಳಿಸಿ ಗಮನ ಸೆಳೆದರು.

ADVERTISEMENT

ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರವೀಂದ್ರ ಜಡೇಜಾ ಅವರು ದೀರ್ಘ ಕಾಲದ ವರೆಗೆಅಂಗಳದಲ್ಲಿ ಉಳಿದು, ಇಂಗ್ಲೆಂಡ್‌ ತಂಡಕ್ಕೆ ಪ್ರತಿರೋಧ ತೋರಿದರು. 120 ಎಸೆತಗಳನ್ನು ಎದುರಿಸಿ 40 ರನ್‌ ಗಳಿಸಿ ಔಟಾದರು. ಈ ಮೂಲಕ ಭಾರತದ ಆಟವೂ ಅಂತ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.