
ಶುಭಮನ್ ಗಿಲ್, ರಿಷಭ್ ಪಂತ್
(ಪಿಟಿಐ ಚಿತ್ರ)
ಕೊಲ್ಕತ್ತ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಲ್ಲಿನ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಭಾರತ ತಂಡ ಕಳೆದ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಾಡಿರದ ಹೊಸ ಪ್ರಯೋಗ ಒಂದನ್ನು ಮಾಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯದ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ತಂಡಕ್ಕೆ ಮರಳಿದ್ದಾರೆ. ಹಾಗೂ ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಬರೋಬ್ಬರಿ 6 ಮಂದಿ ಎಡಗೈ ಬ್ಯಾಟರ್‌ಗಳು ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಈ ರೀತಿಯ ಪ್ರಯೋಗ ಮಾಡಿರುವುದು ಇದೇ ಮೊದಲು. ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ವಾಷಿಂಗ್‌ಟನ್ ಸುಂದರ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ ಯಾದವ್ ಇಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿರುವ ಎಡಗೈ ಆಟಗಾರರಾಗಿದ್ದಾರೆ.
ಇದಕ್ಕೂ ಮೊದಲು ನಡೆದ ಬಹುತೇಕ ಪಂದ್ಯಾವಳಿಗಳಲ್ಲಿ ಭಾರತ ತಂಡ ನಾಲ್ವರು ಎಡಗೈ ಬ್ಯಾಟರ್‌ಗಳ ಜೊತೆಗೆ ಕಣಕ್ಕಿಳಿಯುತ್ತಿತ್ತು. ಆದರೆ, ಬರೋಬ್ಬರಿ 596 ಪಂದ್ಯಗಳ ಬಳಿಕ ಇಂದು ಈಡೆನ್ ಗಾರ್ಡನ್ಸ್‌ನಲ್ಲಿ ಆರಂಭಗೊಂಡಿರುವ ಪಂದ್ಯದಲ್ಲಿ 6 ಜನ ಎಡಗೈ ಬ್ಯಾಟರ್‌ಗಳ ಜೊತೆ ಕಣಕ್ಕಿಳಿದಿದ್ದಾರೆ.
ಯಶಸ್ವಿ ಜೈಸ್ವಾಲ್ (ಎಡಗೈ ಬ್ಯಾಟರ್)
ಕೆ.ಎಲ್. ರಾಹುಲ್ (ಬಲಗೈ ಬ್ಯಾಟರ್)
ವಾಷಿಂಗ್‌ಟನ್ ಸುಂದರ್ (ಎಡಗೈ ಬ್ಯಾಟರ್)
ಶುಭಮನ್ ಗಿಲ್ (ಬಲಗೈ ಬ್ಯಾಟರ್)
ರಿಷಭ್ ಪಂತ್ (ವಿಕೆಟ್ ಕೀಪರ್, ಎಡಗೈ ಬ್ಯಾಟರ್)
ರವೀಂದ್ರ ಜಡೇಜಾ (ಎಡಗೈ ಬ್ಯಾಟರ್)
ಧ್ರುವ್ ಜುರೆಲ್ (ಬಲಗೈ ಬ್ಯಾಟರ್)
ಅಕ್ಷರ್ ಪಟೇಲ್ (ಎಡಗೈ ಬ್ಯಾಟರ್)
ಕುಲದೀಪ ಯಾದವ್ (ಎಡಗೈ ಬ್ಯಾಟರ್)
ಜಸ್‌ಪ್ರೀತ್ ಬುಮ್ರಾ (ಬಲಗೈ ಬ್ಯಾಟರ್)
ಮೊಹಮ್ಮದ್ ಸಿರಾಜ್ (ಬಲಗೈ ಬ್ಯಾಟರ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.