ADVERTISEMENT

Sri Lanka VS India, 3rd ODI| ಲಂಕಾ ತಂಡಕ್ಕೆ ಮಣಿದ ಭಾರತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 20:17 IST
Last Updated 23 ಜುಲೈ 2021, 20:17 IST
   

ಕೊಲಂಬೊ: ಆರಂಭಿಕ ಬ್ಯಾಟ್ಸ್‌ಮನ್ ಆವಿಷ್ಕ ಫರ್ನಾಂಡೊ ಮತ್ತು ಮೂರನೇ ಕ್ರಮಾಂಕದ ಭಾನುಕ ರಾಜಪಕ್ಸ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಭಾರತವನ್ನು ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಮೂರು ವಿಕೆಟ್‌ಗಳಿಂದ ಮಣಿಸಿತು.

ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ಸರಣಿಯನ್ನು ತ್ನದಾಗಿಸಿಕೊಂಡಿತು.

ಮಳೆಯಿಂದಾಗಿ ವಿಳಂಬವಾದ ಪಂದ್ಯದ ಇನಿಂಗ್ಸ್‌ ಅನ್ನು 47 ಓವರ್‌ ಗಳಿಗೆ ನಿಗದಿಪಡಿಸಲಾಗಿತ್ತು. ಟಾಸ್ ಗೆದ್ದ ಭಾರತವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 43.1 ಓವರ್‌ಗಳಲ್ಲಿ 225 ರನ್ ಗಳಿಸಿ ಆಲೌಟ್ ಆಯಿತು.

ADVERTISEMENT

ಒಂದು ರನ್ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡ ಪೃಥ್ವಿ ಶಾ (49 ರನ್) ಮತ್ತು ಸಂಜು ಸ್ಯಾಮ್ಸನ್ (46ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 70 ರನ್‌ ಸೇರಿಸಿದರು. ಆದರೆ, ನಾಯಕ ಶಿಖರ್ ಧವನ್, ಮನೀಷ್ ಪಾಂಡೆ, ಪದಾರ್ಪಣೆ ಮಾಡಿದ ನಿತೀಶ್ ರಾಣಾ, ಕನ್ನಡಿಗ ಕೃಷ್ಣಪ್ಪ ಗೌತಮ್ ಅವರು ಉತ್ತಮ ಕಾಣಿಕೆ ನೀಡುವಲ್ಲಿ ವಿಫಲರಾದರು.

ಮುಂಬೈಕರ್ ಸೂರ್ಯಕುಮಾರ್ ಯಾದವ್ (40;37ಎ) ಅವರಿಗೂ ಅರ್ಧಶತಕ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್, ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್‌ಗಳನ್ನು ಅವರು ಗಳಿಸಿದರು. ಇನ್ನೊಂದೆಡೆ ಧನಂಜಯ ಅವರು ಸೂರ್ಯ, ರಾಣಾ ಮತ್ತು ಗೌತಮ್ ವಿಕೆಟ್‌ಗಳನ್ನು ಕಬಳಿಸಿ ಮಧ್ಯಮಕ್ರಮಾಂಕಕ್ಕೆ ಪೆಟ್ಟುಕೊಟ್ಟರು.

ಇದರಿಂದಾಗಿ ಭಾರತ ತಂಡವು ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಐವರು ಪದಾರ್ಪಣೆ: ಈ ಪಂದ್ಯದಲ್ಲಿ ಕೃಷ್ಣಪ್ಪ ಗೌತಮ್ ಸೇರಿದಂತೆ ಐವರು ಆಟಗಾರರಿಗೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು.

ಎಡಗೈ ಬ್ಯಾಟ್ಸ್‌ಮನ್ ನಿತೀಶ್ ರಾಣಾ, ಸ್ಪಿನ್ನರ್ ರಾಹುಲ್ ಚಾಹರ್, ಎಡಗೈ ಮಧ್ಯಮವೇಗಿ ಚೇತನ್ ಸಕಾರಿಯಾ, ಮತ್ತು ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ತಮ್ಮ ಚೊಚ್ಚಲ ಪಂದ್ಯ ಆಡಿದರು.

ಭಾರತ:225 (43.1/47)

ಶ್ರೀಲಂಕಾ:227/7 (39/47)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.