ADVERTISEMENT

ಟಿ20; ಟಾಸ್ ಗೆದ್ದ ಶ್ರೀಲಂಕಾ, ಬೌಲಿಂಗ್ ಆಯ್ಕೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2021, 15:08 IST
Last Updated 25 ಜುಲೈ 2021, 15:08 IST
   

ಕೊಲೊಂಬೊ; ಇಲ್ಲಿನ ಕೊಲೊಂಬೊ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಶ್ರೀಲಂಕಾ ನಡುವಿನ ಟಿ20 ಮೊದಲ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದಿರುವ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭಾರತದ ವಿರುದ್ಧ ಕಡೆಯ ಏಕದಿನ ಪಂದ್ಯವನ್ನು ಗೆದ್ದು ಉತ್ಸಾಹದಲ್ಲಿರುವ ಶ್ರೀಲಂಕಾ ಪಡೆ ಟಿ20 ಸರಣಿಯ ಮೊದಲನೇ ಪಂದ್ಯ ಗೆದ್ದು ಭಾರತದ ಎದುರು ತನ್ನ ಸಾಮರ್ಥ್ಯ ತೋರಿಸಲುಸಿದ್ದವಾಗಿದೆ. ಶ್ರೀಲಂಕಾ ಹಾಗೂ ಭಾರತ ಒಟ್ಟು ಮೂರು ಟಿ20 ಪಂದ್ಯಗಳನ್ನು ಆಡಲಿವೆ.

ತಂಡಗಳ ಆಟಗಾರರು ಇಂತಿದ್ದಾರೆ: ಭಾರತ; ಶಿಖರ್ ದವನ್ (ನಾಯಕ) ಪೃಥ್ವಿ ಶಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ಧಿಕ್ ಪಾಂಡ್ಯ, ಕುನಾಲ್ ಪಾಂಡ್ಯ, ದೀಪಕ್ ಚಹಾರ್, ಭುವನೇಶ್ವರ ಕುಮಾರ್, ಯಜುವೇಂದ್ರ ಚಹಾಲ್, ವರುಣ್ಚಕ್ರವರ್ತಿ

ADVERTISEMENT

ಶ್ರೀಲಂಕಾ; ದಾಸುನ್ ಶಾನಕಾ (ನಾಯಕ), ಅವಿಶಾಕ್ ಫರ್ನಾಂಡೊ, ಮಿನೋದ್ ಭಾನುಕಾ, ಧನಂಜಯಾ ಡಿ ಸಿಲ್ವಾ, ಚಾರಿತ್ ಅಸ್ಲಂಕಾ, ಆಸೇನ್ ಭಂಡಾರ, ವಾನಿದು ಹಾಸರಂಗಾ, ಚಾಮಿಕಾ ಕರುಣಾರತ್ನೆ, ಇಸುರು ಉಡಾನಾ, ಅಖಿಲಾ ಧನಂಜಯ, ಧುಷ್ಯಂತ್ ಚಾಮೀರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.