ADVERTISEMENT

ಮಹಿಳಾ ಕ್ರಿಕೆಟ್ | ಭಾರತದ ಎದುರು ವಿಂಡೀಸ್‌ಗೆ ಜಯ; ಸರಣಿಯಲ್ಲಿ 1–1ರ ಸಮಬಲ

ಸ್ಮೃತಿ ಮಂದಾನ ಅರ್ಧಶತಕ

ಪಿಟಿಐ
Published 18 ಡಿಸೆಂಬರ್ 2024, 0:41 IST
Last Updated 18 ಡಿಸೆಂಬರ್ 2024, 0:41 IST
ವೆಸ್ಟ್ ಇಂಡೀಸ್ ತಂಡದ ಹೆಯಲಿ ಮ್ಯಾಥ್ಯೂಸ್ ಬ್ಯಾಟಿಂಗ್ 
ವೆಸ್ಟ್ ಇಂಡೀಸ್ ತಂಡದ ಹೆಯಲಿ ಮ್ಯಾಥ್ಯೂಸ್ ಬ್ಯಾಟಿಂಗ್    

ನವಿ ಮುಂಬೈ: ನಾಯಕಿ ಹೆಯಲಿ ಮ್ಯಾಥ್ಯೂಸ್ ಅಜೇಯ ಅರ್ಧಶತಕದ ಬಲದಿಂದ ವೆಸ್ಟ್ ಇಂಡೀಸ್ ಮಹಿಳೆಯರ ತಂಡವು ಮಂಗಳವಾರ ನಡೆದ ಭಾರತದ ಎದುರಿನ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಜಯಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. 

ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂದಾನ (62; 41ಎ, 4X9, 6X1) ಮತ್ತು ರಿಚಾ ಘೋಷ್ (32; 17ಎ, 4X6) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 159 ರನ್‌ ಗಳಿಸಿತು. 

ಈ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಪ್ರವಾಸಿ ಬಳಗವು ಮ್ಯಾಥ್ಯೂಸ್ (ಔಟಾಗದೆ 85; 47ಎ) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 15.4 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಜಯಿಸಿತು. 

ADVERTISEMENT

ಮ್ಯಾಥ್ಯೂಸ್ ಮತ್ತು ಕಿಯಾನಾ ಜೋಸೆಫ್ (38 ರನ್) ಮೊದಲ ವಿಕೆಟ್ ಜೊತೆಯಾಟದಲ್ಲಿ 66 ರನ್ ಗಳಿಸಿದರು. ಕಿಯಾನಾ ಔಟಾದ ನಂತರ ಶೆಮೈನ್ ಕ್ಯಾಂಪ್‌ಬೆಲ್ 26 ಎಸೆತಗಳಲ್ಲಿ 29 ರನ್ ಗಳಿಸಿದರು. ಹೆಯಲಿ 17 ಬೌಂಡರಿ ಗಳಿಸಿದರು. 

ಸಂಕ್ಷಿಪ್ತ ಸ್ಕೋರು

ಭಾರತ: 20 ಓವರ್‌ಗಳಲ್ಲಿ 9ಕ್ಕೆ159 (ಸ್ಮೃತಿ ಮಂದಾನ 62, ರಿಚಾ ಘೋಷ್ 32, ಚೈನೆಲಿ ಹೆನ್ರಿ 37ಕ್ಕೆ2, ದಿಯಾಂದ್ರ ಡಾಟಿನ್ 14ಕ್ಕೆ2, ಹೆಯಲಿ ಮ್ಯಾಥ್ಯೂಸ್ 36ಕ್ಕೆ2, ಅಫೈ ಫ್ಲೆಚರ್ 28ಕ್ಕೆ2)

ವೆಸ್ಟ್ ಇಂಡೀಸ್: 15.4 ಓವರ್‌ಗಳಲ್ಲಿ 1 ವಿಕೆಟ್‌ಗೆ 160 (ಹೆಯಲಿ ಮ್ಯಾಥ್ಯೂಸ್ ಔಟಾಗದೆ 85, ಕಿಯಾನಾ ಜೋಸೆಫ್ 38, ಶೆಮೈನ್ ಕ್ಯಾಂಪ್‌ಬೆಲ್ 29, ಸೈಮಾ ಠಾಕೂರ್ 27ಕ್ಕೆ1)

ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 9 ವಿಕೆಟ್‌ಗಳಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.