ಟೀಂ ಇಂಡಿಯಾ ಆಟಗಾರ್ತಿಯರು
ಮುಲ್ಲನಪುರ (ಪಂಜಾಬ್): ಮೊದಲ ಪಂದ್ಯ ಸೋತಿರುವ ಆತಿಥೇಯ ಭಾರತ ತಂಡ, ಮಹಿಳೆಯರ ಎರಡನೇ ಏಕದಿನ ಪಂದ್ಯದಲ್ಲಿ ಬುಧವಾರ ಅಲಿಸಾ ಹೀಲಿ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಿತ ಪ್ರದರ್ಶನ ನೀಡುವ ಗುರಿಯಲ್ಲಿದೆ.
ಭಾನುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಪಡೆ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಆಟ ಪ್ರದರ್ಶಿಸಿತ್ತು. ಪ್ರತಿಕಾ ರಾವಲ್, ಸ್ಮೃತಿ ಮಂದಾನ, ಹರ್ಲಿನ್ ಡಿಯೊಲ್ ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಕಳಪೆ ಫಿಲ್ಡಿಂಗ್ ದುಬಾರಿಯಾಯಿತು.
ಆತಿಥೇಯ ಫೀಲ್ಡರ್‌ಗಳು ನಾಲ್ಕು ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ್ದ ಪರಿಣಾಮ ಆಸ್ಟ್ರೇಲಿಯಾ ಭಾರತದ ನಿಗದಿಪಡಿಸಿದ ದೊಡ್ಡ ಗುರಿಯನ್ನು ಸುಲಭವಾಗಿ ತಲುಪಿತು. ಭಾರತ ತಂಡದ ಸ್ಪಿನ್ ಬೌಲಿಂಗ್ ಕೂಡ ಸುಧಾರಿಸಬೇಕಾಗಿದೆ. ಕಣಕ್ಕಿಳಿದ ನಾಲ್ವರು ಸ್ಪಿನ್ನರ್‌ಗಳಲ್ಲಿ ಸ್ನೇಹ ರಾಣ ಮಾತ್ರ ವಿಕೆಟ್ ಪಡೆದಿದ್ದರು. ಈ ಸೋಲು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಇನ್ನೊಂದು ಕಡೆ ಆಸ್ಟ್ರೇಲಿಯಾ, ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಆರಂಭಿಸಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.