ADVERTISEMENT

ಟಿ20 ವಿಶ್ವಕಪ್: ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಕ್ಷರ್‌ಗೆ ಸ್ಥಾನ?

ಪಿಟಿಐ
Published 24 ಫೆಬ್ರುವರಿ 2026, 20:36 IST
Last Updated 24 ಫೆಬ್ರುವರಿ 2026, 20:36 IST
<div class="paragraphs"><p>ಅಕ್ಷರ್‌ ಪಟೇಲ್ &nbsp;‘ಎಕ್ಸ್‌’ ಚಿತ್ರ</p></div>

ಅಕ್ಷರ್‌ ಪಟೇಲ್  ‘ಎಕ್ಸ್‌’ ಚಿತ್ರ

   

ಚೆನ್ನೈ: ದಕ್ಷಿಣ ಆಫ್ರಿಕಾ ಕೈಲಿ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದಲ್ಲಿ ಮುಖಭಂಗ ಅನುಭವಿಸಿದ ನಂತರ ಭಾರತ ತಂಡದವರು, ಜಿಂಬಾಬ್ವೆ ಎದುರಿನ ಪಂದ್ಯಕ್ಕೆ ಸಜ್ಜಾಗಲು ಮಂಗಳವಾರ ಇಲ್ಲಿ ಹೊನಲು ಬೆಳಕಿನಡಿ ಅಭ್ಯಾಸದಲ್ಲಿ ತೊಡಗಿದರು.

ವಿಕೆಟ್ ಕೀಪರ್‌ಗಳಾದ ಇಶಾನ್‌ ಕಿಶನ್, ಸಂಜು ಸ್ಯಾಮ್ಸನ್ ಜೊತೆ, ಟೂರ್ನಿಯಲ್ಲಿ ಪರದಾಡುತ್ತಿರುವ ತಿಲಕ್‌ ವರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ಅವರೂ ನೆಟ್ಸ್‌ಗಿಳಿದರು. ಕಿಶನ್, ಸಂಜು ಅವರಿಗೆ ಅರ್ಷದೀಪ್ ಸಿಂಗ್ ಮತ್ತು ಸ್ಥಳೀಯ ನೆಟ್ ಬೌಲರ್‌ಗಳು ಬೌಲಿಂಗ್ ಮಾಡಿದರು.

ADVERTISEMENT

ಈ ಟೂರ್ನಿಯಲ್ಲಿ ರನ್ ಬರ ಎದುರಿಸಿರುವ 25 ವರ್ಷ ವಯಸ್ಸಿನ ಅಭಿಷೇಕ್ (0,0,0, 15) ಅವರು ಎರಡನೇ ಬ್ಯಾಚಿನಲ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಜೊತೆ ಅಭ್ಯಾಸಕ್ಕೆ ಇಳಿದರು. ಅಭಿಷೇಕ್‌ ಶರ್ಮಾ ಅವರು ಆಫ್‌ ಸ್ಪಿನ್‌ ಎಸೆತಗಳನ್ನು ಎದುರಿಸಿದರು. ಅವರ ದೌರ್ಬಲ್ಯ ಅರಿತ ಎದುರಾಳಿ ತಂಡಗಳು ಆರಂಭದಲ್ಲೇ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿ ಯಶಸ್ಸು ಕಂಡಿದ್ದವು.

ಅಕ್ಷರ್ ಅಭ್ಯಾಸ:

ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್ ಅವರು ಮಂಗಳವಾರ ಸುಮಾರು ಅರ್ಧ ಗಂಟೆ ನೆಟ್ಸ್‌ನಲ್ಲಿ ಕೌಶಲ ಹುರಿಗೊಳಿಸಿದರು. ಇದು– ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಆಡುವ 11ರಲ್ಲಿ ಅವರು ಮರಳುವ ಸಾಧ್ಯತೆಗೆ ಉತ್ತರ ನೀಡುವ ರೀತಿಯಲ್ಲಿತ್ತು.

ದಕ್ಷಿಣ ಆಫ್ರಿಕಾ ಎದುರು ಅಹಮದಾಬಾದಿನಲ್ಲಿ ನಡೆದ ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಿ, ಉಪ ನಾಯಕ ಅಕ್ಷರ್ ಅವರನ್ನು ಕೈಬಿಡಲಾಗಿತ್ತು. ಇದು ಕ್ರಿಕೆಟ್‌ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. 

ಹರಿಣಗಳ ಪಡೆಯಲ್ಲಿ ಬೀಸಾಟ ವಾಡುವ ಎಡಗೈ ಬ್ಯಾಟರ್‌ಗಳಾದ ಕ್ವಿಂಟನ್ ಡಿಕಾಕ್‌ ಮತ್ತು ರಿಕೆಲ್ಟನ್ ಅವರನ್ನು ಪವರ್‌ಪ್ಲೇ ಅವಧಿಯಲ್ಲಿ ನಿಯಂತ್ರಿಸಲು ವಾಷಿಂಗ್ಟನ್ ಅಸ್ತ್ರವಾಗಬಲ್ಲರು ಎಂಬ ಉದ್ದೇಶ ಇದರ ಹಿಂದಿತ್ತು. ಆದರೆ ಈ ವಿಕೆಟ್‌ಗಳನ್ನು ವೇಗದ ಬೌಲರ್ ಬೂಮ್ರಾ ಪಡೆದರು. ಸುಂದರ್ ಎರಡು ಓವರ್‌ ಅಷ್ಟೇ ಮಾಡಿದರು. ಭಾರತ 76 ರನ್‌ಗಳಿಂದ ಪಂದ್ಯ ಸೋತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.