ADVERTISEMENT

Indian Premier League 2022: ಬಿಕರಿಯಾಗದ ಸುರೇಶ್‌ ರೈನಾ– ಹರಭಜನ್‌ ಖೇದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2022, 5:57 IST
Last Updated 13 ಫೆಬ್ರುವರಿ 2022, 5:57 IST
ಸುರೇಶ್‌ ರೈನಾ
ಸುರೇಶ್‌ ರೈನಾ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನ ಬ್ಯಾಟರ್‌ ಸುರೇಶ್‌ ರೈನಾ ಬಿಕರಿಯಾಗದಿರುವುದಕ್ಕೆ ಮಾಜಿ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಅವರು ಖೇದ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, ‘ಸುರೇಶ್‌ ರೈನಾ ಅವರು ಐಪಿಎಲ್ ಹರಾಜು ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಬಿಕರಿಯಾಗದಿರುವುದನ್ನು ನೋಡಿ ದುಃಖವಾಗಿದೆ’ ಎಂದು ಬರೆದುಕೊಂಡಿದ್ದಾರೆ.

'ಮಿಸ್ಟರ್ ಐಪಿಎಲ್' ಎಂದೇ ಖ್ಯಾತರಾಗಿರುವ ಸುರೇಶ್ ರೈನಾ ಅವರು ಕಳೆದ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡಿದ್ದರು.

ADVERTISEMENT

ಬಿಡ್ ಪ್ರಕ್ರಿಯೆಯ ಮೊದಲ ದಿನ ಭಾರತದ 74 ಮತ್ತು ವಿದೇಶದ 20 ಆಟಗಾರರು ವಿವಿಧ ಫ್ರ್ಯಾಂಚೈಸಿಗಳಿಂದ ಖರೀದಿಯಾದರು. ಬಿಡ್‌ ಅಂತಿಮ ಪಟ್ಟಿಯಲ್ಲಿ 590 ಆಟಗಾರರು ಸ್ಥಾನ ಪಡೆದಿದ್ದಾರೆ. ಒಟ್ಟು 217 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.