ADVERTISEMENT

ಬೆಂಗಳೂರಿನಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿಯರು

ಪಿಟಿಐ
Published 10 ಆಗಸ್ಟ್ 2021, 16:56 IST
Last Updated 10 ಆಗಸ್ಟ್ 2021, 16:56 IST
ಭಾರತ ಮಹಿಳಾ ತಂಡ
ಭಾರತ ಮಹಿಳಾ ತಂಡ   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿಯರು ಆಸ್ಟ್ರೇಲಿಯಾ ಪ್ರವಾಸಕ್ಕೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳುವ ಸಲುವಾಗಿ ಮಂಗಳವಾರ ಬೆಂಗಳೂರಿಗೆ ಬಂದಿದ್ದಾರೆ.

ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ನಿಗದಿಯಾಗಿದೆ. ಇದಕ್ಕಾಗಿ ಒಟ್ಟು 30 ಆಟಗಾರ್ತಿಯರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದ್ದಾರೆ. ತರಬೇತಿಗೂ ಮುನ್ನ ಎಲ್ಲರೂ ಆರು ದಿನ ಪ್ರತ್ಯೇಕ ವಾಸದಲ್ಲಿ ಇರಲಿದ್ದಾರೆ.

‘ದ ಹಂಡ್ರೆಡ್‌’ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ ಮತ್ತು ಶಫಾಲಿ ವರ್ಮಾ ಅವರಿಗೆ ಇದೇ 22ರೊಳಗೆ ತರಬೇತಿ ಶಿಬಿರ ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ಇವರು ಕೂಡ ಬೆಂಗಳೂರು ತಲುಪಿದ ಬಳಿಕ ಆರು ದಿನ ಪ್ರತ್ಯೇಕ ವಾಸದ ಮೊರೆ ಹೋಗಬೇಕಾಗುತ್ತದೆ.

ADVERTISEMENT

ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡವು ಮೂರು ಪಂದ್ಯಗಳ ಏಕದಿನ, ಏಕೈಕ ಹೊನಲು ಬೆಳಕಿನ ಟೆಸ್ಟ್‌ ಹಾಗೂ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಗಳಲ್ಲಿ ಪಾಲ್ಗೊಳ್ಳಲಿದೆ. ಇದಕ್ಕಾಗಿ ತಂಡ ಈ ತಿಂಗಳ ಅಂತ್ಯದಲ್ಲಿ ಕಾಂಗರೂ ನಾಡಿಗೆ ಪ್ರವಾಸ ಬೆಳೆಸಲಿದೆ.

ತರಬೇತಿ ಶಿಬಿರದ ವೇಳೆ ಆಟಗಾರ್ತಿಯರು ತಿಳಿ ಗುಲಾಬಿ ಬಣ್ಣದ ಚೆಂಡಿನೊಂದಿಗೆ ಅಭ್ಯಾಸ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.