ADVERTISEMENT

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಮೂರನೇ ಸುತ್ತಿಗೆ ಲಕ್ಷ್ಯ ಸೇನ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 21:50 IST
Last Updated 28 ಅಕ್ಟೋಬರ್ 2021, 21:50 IST
ಲಕ್ಷ್ಯ ಸೇನ್
ಲಕ್ಷ್ಯ ಸೇನ್   

ಪ್ಯಾರಿಸ್: ಭಾರತದ ಲಕ್ಷ್ಯ ಸೇನ್ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ 21–17, 21–13 ರಿಂದ ಸಿಂಗಪುರದ ಲೊಹ್ ಕೀನ್ ಯೆವ್ ವಿರುದ್ಧ ಗೆದ್ದರು. 40 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಲಕ್ಷ್ಯ ಮೇಲುಗೈ ಸಾಧಿಸಿದರು.

ಆದರೆ, ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ನಿರಾಶೆಯ ದಿನವಾಯಿತು. ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್ ರಣಕಿ ರೆಡ್ಡಿ ಜೋಡಿಯು ಸೋತಿತು. 16 ಘಟ್ಟದಲ್ಲಿ ಇಂಡೋನೆಷ್ಯಾದ ಪ್ರವೀಣ್ ಜೊರ್ಡಾನ್ ಮತ್ತು ಮೆಲಾಟಿ ಡೇವಾ ಓಕ್ಟಾವಿಯಾಂಟಿ 15–21, 21–17, 21–19 ರಿಂದ ಭಾರತದ ಜೋಡಿಯನ್ನು ಸೋಲಿಸಿದರು.

ADVERTISEMENT

ಪಂದ್ಯದ ಮೊದಲ ಗೇಮ್‌ನಲ್ಲಿ ಅಶ್ವಿನಿ–ಸಾತ್ವಿಕ್ ಜೋಡಿಯು ಉತ್ತಮವಾಗಿ ಆಡಿ ಗೆದ್ದಿತು. ಆದರೆ ನಂತರದ ಎರಡು ಗೇಮ್‌ಗಳಲ್ಲಿ ಮೇಲುಗೈ ಸಾಧಿಸುವಲ್ಲಿ ವಿಫಲವಾಯಿತು.

ಪುರುಷರ ಸಿಂಗಲ್ಸ್‌ನ ಇನ್ನೊಂದು ಪಂದ್ಯದಲ್ಲಿ ಭಾರತದ ಸಮೀರ್ ವರ್ಮಾ ಗಾಯಗೊಂಡು ನಿವೃತ್ತರಾದರು. ಇಂಡೋನೆಷ್ಯಾದ ಶೇಸರ್ ಹಿರೇನ್ ರುಸ್ತಾವಿಟೊ ವಿರುದ್ಧ ನಡೆದ ಪಂದ್ಯದಲ್ಲಿ 16–21, 21–12ರಲ್ಲಿದ್ದಾಗ ಸಮೀರ್ ಗಾಯದಿಂದ ಬಳಲಿ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.