ADVERTISEMENT

ಶ್ರೀಲಂಕಾ ವಿರುದ್ಧದ ಸರಣಿ: ಮುಂಬೈಗೆ ಬಂದಿಳಿದ ಶಿಖರ್ ಬಳಗ

ಭಾರತ ತಂಡಕ್ಕೆ ಕ್ವಾರಂಟೈನ್‌

ಪಿಟಿಐ
Published 15 ಜೂನ್ 2021, 16:56 IST
Last Updated 15 ಜೂನ್ 2021, 16:56 IST
ಶಿಖರ್ ಧವನ್‌ ಮತ್ತು ಭುವನೇಶ್ವರ ಕುಮಾರ್‌– ಬಿಸಿಸಿಐ ಟ್ವಿಟರ್ ಚಿತ್ರ
ಶಿಖರ್ ಧವನ್‌ ಮತ್ತು ಭುವನೇಶ್ವರ ಕುಮಾರ್‌– ಬಿಸಿಸಿಐ ಟ್ವಿಟರ್ ಚಿತ್ರ   

ಮುಂಬೈ: ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಪಂದ್ಯಗಳ ಸರಣಿಯಲ್ಲಿ ಆಡಲಿರುವ ಶಿಖರ್ ಧವನ್ ನಾಯಕತ್ವದ ಭಾರತ ತಂಡದ ಆಟಗಾರರು ಮಂಗಳವಾರ ಇಲ್ಲಿಗೆ ಬಂದಿಳಿದಿದ್ದು, ಎರಡು ವಾರಗಳ ಕಾಲ ಕ್ವಾರಂಟೈನ್‌ನಲ್ಲಿರಲಿದ್ದಾರೆ.

‘ಶ್ರೀಲಂಕಾ ವಿರುದ್ಧದ ಆರು ಪಂದ್ಯಗಳ ಸರಣಿ ಜುಲೈ 13ರಂದು ಆರಂಭವಾಗಲಿದೆ. ಇದೇ 28ರವರೆಗೆ ತಂಡದ ಆಟಗಾರರು ಕ್ವಾರಂಟೈನ್‌ನಲ್ಲಿರಲಿದ್ದಾರೆ. ಈ ವೇಳೆ ಅವರಿಗೆ ಆರು ಬಾರಿ ಕೋವಿಡ್‌ ಸಂಬಂಧಿತ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಕ್ವಾರಂಟೈನ್ ಮುಗಿಸಿದ ಬಳಿಕ ಕೊಲಂಬೊಕ್ಕೆ ತೆರಳಲಿದ್ದಾರೆ.

‘ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರರು ಮುಂಬೈನಲ್ಲಿ ಸೇರಿದ್ದಾರೆ. ಕೆಲವು ಹೊಸ ಮತ್ತು ಸಂತಸ ತುಂಬಿರುವ ಮುಖಗಳನ್ನು ನೋಡಲು ಖುಷಿಯಾಗುತ್ತದೆ‘ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಟ್ವೀಟ್ ಮಾಡಿದೆ. ಶಿಖರ್‌ ಧವನ್ ಸೇರಿದಂತೆ ಕೆಲವು ಆಟಗಾರರ ಚಿತ್ರಗಳನ್ನು ಹಂಚಿಕೊಂಡಿದೆ.

ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗಾಗಿ ಪ್ರಸ್ತುತ ಇಂಗ್ಲೆಂಡ್‌ನಲ್ಲಿರುವ ವಿರಾಟ್‌ ಕೊಹ್ಲಿ ನೇತೃತ್ವದ ತಂಡ ಮತ್ತು ಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವ ತಂಡಕ್ಕೂ ಒಂದೇ ರೀತಿಯ ಕ್ವಾರಂಟೈನ್‌ ಮಾರ್ಗಸೂಚಿಗಳು ಇರಲಿವೆ‘ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.