ADVERTISEMENT

ಚಾಂಪಿಯನ್ಸ್‌ ಟ್ರೋಫಿಯಿಂದ ಬೂಮ್ರಾ ಅಲಭ್ಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 22:18 IST
Last Updated 11 ಫೆಬ್ರುವರಿ 2025, 22:18 IST
<div class="paragraphs"><p>ಜಸ್‌ಪ್ರೀತ್ ಬೂಮ್ರಾ</p></div>

ಜಸ್‌ಪ್ರೀತ್ ಬೂಮ್ರಾ

   

(ಪಿಟಿಐ ಚಿತ್ರ)

ನವದೆಹಲಿ: ಬೆನ್ನು ನೋವಿನಿಂದ ಬಳಲಿರುವ ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಮುಂಬರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಿಂದ ಹೊರ ನಡೆದಿದ್ದಾರೆ. ಬೂಮ್ರಾ ಬದಲು ಯುವ ಆಟಗಾರ ಹರ್ಷಿತ್‌ ರಾಣಾ ಅವರಿಗೆ ಆಯ್ಕೆ ಸಮಿತಿ ಮಣೆ ಹಾಕಿದೆ.

ADVERTISEMENT

2022ರಲ್ಲಿ ಬೂಮ್ರಾ ಬೆನ್ನು ನೋವಿನ ಕಾರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಇತ್ತೀಚೆಗೆ ಸಿಡ್ನಿ ಟೆಸ್ಟ್‌ನ ಅಂತಿಮ ಪಂದ್ಯದಲ್ಲಿ ಬೌಲಿಂಗ್‌ ಮಾಡುವ ವೇಳೆ ಮತ್ತೆ ಬೆನ್ನು ನೋವಿಗೆ ಗುರಿಯಾಗಿದ್ದರು.  ಎನ್‌ಸಿಎ ನೀಡಿರುವ ವರದಿಯಲ್ಲಿ ಬೂಮ್ರಾ ಪುನಶ್ಚೇತನ ಶಿಬಿರ ಪೂರೈಸಿದ್ದಾರೆ ಆದರೆ ಟೂರ್ನಿ ವೇಳೆಗೆ ಫಿಟ್‌ ಆಗುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಆಯ್ಕೆ ಸಮಿತಿ ಬಿಡುಗಡೆ ಮಾಡಿರುವ ಸಂಭಾವ್ಯರ ಪಟ್ಟಿಯಲ್ಲಿ ವರುಣ್‌ ಚಕ್ರವರ್ತಿ ಮತ್ತು ಯಶಸ್ವಿ ಜೈಸ್ವಾಲ್‌ ಸ್ಥಾನ ಪಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.