ADVERTISEMENT

IPL-2020 | DC vs KXIP: 5 ಸಾವಿರ ರನ್ ಪೂರೈಸಿದ ಧವನ್

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:54 IST
Last Updated 20 ಅಕ್ಟೋಬರ್ 2020, 15:54 IST
ಶಿಖರ್‌ ಧವನ್‌
ಶಿಖರ್‌ ಧವನ್‌   

ದುಬೈ: ಐಪಿಎಲ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡ ಶಿಖರ್ ಧವನ್‌, ಈ ಟೂರ್ನಿಯಲ್ಲಿ ಐದು ಸಾವಿರ ರನ್‌ ಕಲೆಹಾಕಿದ ಸಾಧನೆಯನ್ನೂ ಮಾಡಿದರು.

ಕಿಂಗ್ಸ್ ಇಲವೆನ್‌ ಪಂಜಾಬ್‌ ವಿರುದ್ಧ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಅಜೇಯ 106 ರನ್‌ ಗಳಿಸಿದ ಧವನ್‌, ಮುಂಬೈ ಇಂಡಿಯನ್ಸ್‌ ವಿರುದ್ಧ ಆಡಿದ್ದ ಕಳೆದ ಪಂದ್ಯದಲ್ಲಿ 101 ರನ್ ಗಳಿಸಿದ್ದರು.

169ನೇ ಪಂದ್ಯದಲ್ಲಿ ಆಡಿದ ಅವರುಟೂರ್ನಿಯಲ್ಲಿ ಒಟ್ಟು 5,043 ರನ್‌ ಕಲೆಹಾಕಿದ್ದಾರೆ. ಇದರೊಂದಿಗೆ 5 ಸಾವಿರ ರನ್‌ ಪೂರೈಸಿದ ಐದನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ADVERTISEMENT

ಇದಕ್ಕೂ ಮೊದಲು ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ (5,759), ಸಿಎಸ್‌ಕೆ ತಂಡದ ಸುರೇಶ್‌ ರೈನಾ (5,368), ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ (5,158) ಮತ್ತು ಎಸ್‌ಆರ್‌ಎಚ್‌ ನಾಯಕ ಡೇವಿಡ್‌ ವಾರ್ನರ್‌ (5,037) ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.