ADVERTISEMENT

IPL-2020: ಬಲಿಷ್ಠ ಡೆಲ್ಲಿ–ಕೋಲ್ಕತ್ತ ಸೆಣಸಾಟ ಇಂದು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 19:19 IST
Last Updated 23 ಅಕ್ಟೋಬರ್ 2020, 19:19 IST
ಶಿಖರ್ ಧವನ್
ಶಿಖರ್ ಧವನ್   

ಅಬುಧಾಬಿ: ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅಸ್ಥಿರತೆಯ ಆಟದಿಂದ ಪರದಾಡುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್‌ ಶನಿವಾರ ಮುಖಾಮುಖಿಯಾಗಲಿವೆ.

ಸತತ ಎರಡು ಶತಕ ಹೊಡೆದ ದಾಖಲೆ ಮಾಡಿರುವ ಶಿಖರ್ ಧವನ್, ಶ್ರೇಯಸ್ ಅಯ್ಯರ್, ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟೊಯಿನಿಸ್ ಉತ್ತಮ ಲಯದಲ್ಲಿರುವ ಡೆಲ್ಲಿ ಬ್ಯಾಟ್ಸ್‌ಮನ್‌ಗಳು. ಕಗಿಸೊ ರಬಾಡ, ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ತಮ್ಮ ತಂಡವನ್ನು ಗೆಲುವಿನೆಡೆಗೆ ತೆಗೆದುಕೊಂಡು ಹೋಗುವಂತಹ ಬೌಲರ್‌ಗಳು. ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡುತ್ತಿರುವ ಈ ತಂಡದ ಎದುರು ಕೋಲ್ಕತ್ತ ಗೆಲುವು ಸಾಧಿಸಲು ಬಹಳಷ್ಟು ಶ್ರಮಪಡುವ ಅಗತ್ಯವಿದೆ.

ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಹೀನಾಯ ಸೋಲು ಅನುಭವಿಸಿತ್ತು ಕೆಕೆಆರ್. ನೂರು ರನ್‌ಗಳ ಮೊತ್ತವನ್ನೂ ಪೇರಿಸಿರಲಿಲ್ಲ. ಇದೀಗ ಆ ಕಹಿಯನ್ನು ಮರೆತು ಗೆಲುವಿನತ್ತ ಚಿತ್ತ ನೆಡುವ ಸವಾಲು ತಂಡದ ಮುಂದಿದೆ. ಟೂರ್ನಿಯ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿಕೊಂಡ ತಂಡಕ್ಕೆ ಪ್ಲೇ ಆಫ್ ಹಾದಿ ಸುಲಭವಲ್ಲ. ಆದ್ದರಿಂದ ಡೆಲ್ಲಿ ಎದುರಿನ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ.

ADVERTISEMENT

ಪಂದ್ಯ ಆರಂಭ: ಸಂಜೆ 3.30, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.