ADVERTISEMENT

ಆರ್‌ಸಿಬಿಯಿಂದ ಹಸಿರು ಅಭಿಯಾನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:35 IST
Last Updated 25 ಅಕ್ಟೋಬರ್ 2020, 7:35 IST
ಹಸಿರು ಪೋಷಾಕಿನೊಂದಿಗೆ ಎಬಿ ಡಿವಿಲಿಯರ್ಸ್ – ಕೃಪೆ: ಆರ್‌ಸಿಬಿ
ಹಸಿರು ಪೋಷಾಕಿನೊಂದಿಗೆ ಎಬಿ ಡಿವಿಲಿಯರ್ಸ್ – ಕೃಪೆ: ಆರ್‌ಸಿಬಿ   

ದುಬೈ: ಪರಿಸರ ಸಂರಕ್ಷಣೆ ಮತ್ತು ಮಹತ್ವದ ಕುರಿತು ಸಂದೇಶ ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಭಾನುವಾರ ನಡೆಯುವ ಪಂದ್ಯದಲ್ಲಿ ಹಸಿರು ಪೋಷಾಕು ಧರಿಸಿ ಕಣಕ್ಕಿಳಿಯಲಿದೆ.

ಪ್ರತಿವರ್ಷದ ಐಪಿಎಲ್‌ನಲ್ಲಿಯೂ ವಿರಾಟ್ ಕೊಹ್ಲಿ ಬಳಗವು ಒಂದು ಪಂದ್ಯದಲ್ಲಿ ಹಸಿರು ಪೋಷಾಕು ಧರಿಸಿ ಆಡುತ್ತದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರು ಈ ಬಾರಿ ಹಸಿರು ಪೋಷಾಕುಧರಿಸಲಿದೆ.

’ನಾವು ವಾಸಿಸುವ ಭೂಮಿಯ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ.ನೀರು, ವಿದ್ಯುತ್ ಮಿತಬಳಕೆ, ಕಸವಿಲೆವಾರಿಯಲ್ಲಿ ಶಿಸ್ತು ಮತ್ತು ಸರಳ ಜೀವನದ ಮೂಲಕ ಪರಿಸರಕ್ಕೆ ನಾವು ಕಾಣಿಕೆ ನೀಡಬಹುದು. ಅದಕ್ಕೆ ಪ್ರತಿಯಾಗಿ ಮಾನವಕುಲಕ್ಕೂ ಒಳ್ಳೆಯದಾಗುತ್ತದೆ‘ ಎಂದು ಶನಿವಾರ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ವಿಡಿಯೊದಲ್ಲಿ ಆಟಗಾರ ಎಬಿ ಡಿವಿಲಿಯರ್ಸ್, ಆ್ಯರನ್ ಫಿಂಚ್ ಮತ್ತು ವಾಷಿಂಗ್ಟನ್ ಸುಂದರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.