ADVERTISEMENT

IPL 2021 | DC vs CSK: ರಂಗೇರಿದ ಧೋನಿ ಆಟ; ಡೆಲ್ಲಿಗೆ ಸೋಲು, ಫೈನಲ್‌ಗೆ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ.

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 18:26 IST
Last Updated 10 ಅಕ್ಟೋಬರ್ 2021, 18:26 IST

ಕೊನೆಯ ಹಂತದಲ್ಲಿ ಧೋನಿ ಮಿಂಚಿನ ಆಟ

ಫೈನಲ್‌ಗೆ ಚೆನ್ನೈ, ಡೆಲ್ಲಿಗೆ ಮತ್ತೊಂದು ಅವಕಾಶ

ಚೆನ್ನೈ ಗೆಲುವಿನ ರೋಚಕ ಕ್ಷಣ

ಚೆನ್ನೈಗೆ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. 

ಋತುರಾಜ್ ಗಾಯಕವಾಡ್ (70) ಹಾಗೂ ರಾಬಿನ್ ಉತ್ತಪ್ಪ (63) ಆಕರ್ಷಕ ಅರ್ಧಶತಕ ಸಾಧನೆಯ ಬಳಿಕ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 18 ರನ್ ಗಳಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದರು. 

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ (60), ನಾಯಕ ರಿಷಭ್ ಪಂತ್ (51*) ಹಾಗೂ ಶಿಮ್ರೊನ್ ಹೆಟ್ಮೆಯರ್ (37) ಬಿರುಸಿನ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಪೃಥ್ವಿ 27 ಹಾಗೂ ಪಂತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದರು. 

ಆದರೆ ಚೆನ್ನೈ ತಂಡಕ್ಕೆ ಶತಕದ ಜೊತೆಯಾಟ ಕಟ್ಟಿದ ಗಾಯಕವಾಡ್ ಹಾಗೂ ಉತ್ತಪ್ಪ ಭದ್ರ ಅಡಿಪಾಯ ಹಾಕಿಕೊಟ್ಟರು. ಕೊನೆಯ ಹಂತದಲ್ಲಿ ತಮ್ಮ ನೈಜ ಆಟ ಪ್ರದರ್ಶಿಸಿದ ಧೋನಿ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. 
 

ಅಕ್ಷರ್ ಜಾದೂ

ಅಯ್ಯರ್ ಅದ್ಭುತ ಫೀಲ್ಡಿಂಗ್, ರಾಯುಡು ರನೌಟ್

ಗಾಯಕವಾಡ್ ಫಿಫ್ಟಿ, ಚೆನ್ನೈ ನಾಲ್ಕನೇ ವಿಕೆಟ್ ಪತನ

ಟಾಮ್ ಕರನ್ ದಾಳಿಯಲ್ಲಿ ಶ್ರೇಯಸ್ ಅಯ್ಯರ್ ಅವರ ಅದ್ಭುತ ಕ್ಯಾಚ್‌ನಿಂದಾಗಿ ರಾಬಿನ್ ಉತ್ತಪ್ಪ ಔಟಾದರು. 44 ಎಸೆತಗಳನ್ನು ಎದುರಿಸಿದ ಉತ್ತಪ್ಪ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. 

ಬೆನ್ನಲ್ಲೇ ಶಾರ್ದೂಲ್ ಠಾಕೂರ್ ಖಾತೆ ತೆರೆಯಲಾಗದೇ ಮರಳಿದರು. ಅಂಬಟಿ ರಾಯುಡು (1) ಕೂಡ ಅಯ್ಯರ್ ಅದ್ಭುತ ಫೀಲ್ಡಿಂಗ್‌ನಿಂದಾಗಿ ರನೌಟ್ ಆದರು. 15 ಓವರ್ ಅಂತ್ಯಕ್ಕೆ ಚೆನ್ನೈ ನಾಲ್ಕು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ 52 ರನ್‌ಗಳ ಅಗತ್ಯವಿತ್ತು. 

37 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿರುವ ಋತುರಾಜ್ ಗಾಯಕವಾಡ್ ಕ್ರೀಸಿನಲ್ಲಿದ್ದಾರೆ. 

ಶ್ರೇಯಸ್ ಅಯ್ಯರ್ ಅದ್ಭುತ ಕ್ಯಾಚ್

37 ಎಸೆತಗಳಲ್ಲಿ ಗಾಯಕವಾಡ್ ಅರ್ಧಶತಕ

63 ರನ್ ಗಳಿಸಿ ಉತ್ತಪ್ಪ ಔಟ್

ಉತ್ತಪ್ಪ-ಗಾಯಕವಾಡ್ ಶತಕದ ಜೊತೆಯಾಟ, ಚೆನ್ನೈ ದಿಟ್ಟ ಉತ್ತರ

35 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರಾಬಿನ್ ಉತ್ತಪ್ಪ

ಉತ್ತಪ್ಪ ಫಿಫ್ಟಿ, 10 ಓವರ್‌ಗೆ ಚೆನ್ನೈ 81/1

ಆರಂಭಿಕ ಆಘಾತ ಎದುರಿಸಿದ ಚೆನ್ನೈಗೆ ರಾಬಿನ್ ಉತ್ತಪ್ಪ (51*) ಹಾಗೂ ಋತುರಾಜ್ ಗಾಯಕವಾಡ್ (27*) ನೆರವಾದರು. 10 ಓವರ್ ಅಂತ್ಯಕ್ಕೆ ಸಿಎಸ್‌ಕೆ ಒಂದು ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 92 ರನ್‌ಗಳ ಅವಶ್ಯಕತೆಯಿದೆ. 

35 ಎಸೆತಗಳನ್ನು ಎದುರಿಸಿದ ರಾಬಿನ್ ಉತ್ತಪ್ಪ ಆಕರ್ಷಕ ಅರ್ಧಶತಕ ಗಳಿಸಿದರು. 

ಉತ್ತಪ್ಪ ಬಿರುಸಿನ ಆಟ

ಪವರ್ ಪ್ಲೇ ಅಂತ್ಯಕ್ಕೆ ಚೆನ್ನೈ 59/1

ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಫಫ್ ಡುಪ್ಲೆಸಿ (1) ನಿರಾಸೆ ಮೂಡಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದೆ. ಋತುರಾಜ್ ಗಾಯಕವಾಡ್ (16*) ಹಾಗೂ ರಾಬಿನ್ ಉತ್ತಪ್ಪ (40*) ಕ್ರೀಸಿನಲ್ಲಿದ್ದಾರೆ. 

ಮೊದಲ ಓವರ್‌ನಲ್ಲೇ ಫಫ್ ಡುಪ್ಲೆಸಿ ಕ್ಲೀನ್ ಬೌಲ್ಡ್ ಮಾಡಿದ ನಾರ್ಕಿಯಾ

ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸಿದ ಪಂತ್ ಆಟದ ಭಂಗಿ

ಪಂತ್, ಪೃಥ್ವಿ ಬಿರುಸಿನ ಫಿಫ್ಟಿ; ಡೆಲ್ಲಿ 172/5

ಪೃಥ್ವಿ ಶಾ (60), ನಾಯಕ ರಿಷಭ್ ಪಂತ್ (51*) ಹಾಗೂ ಶಿಮ್ರೊನ್ ಹೆಟ್ಮೆಯರ್ (37) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ಪೃಥ್ವಿ ಶಾ 27 ಹಾಗೂ ರಿಷಭ್ ಪಂತ್ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಗಮನ ಸೆಳೆದರು. ಚೆನ್ನೈ ಪರ ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಕಬಳಿಸಿದರು. 

ಜೊತೆಯಾಟ ಮುರಿದ ಬ್ರಾವೊ

ಪಂತ್-ಹೆಟ್ಮೆಯರ್ ಅರ್ಧಶತಕದ ಜೊತೆಯಾಟ

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ 360 ಡಿಗ್ರಿ ವಿಷನ್ ಕ್ಯಾಮೆರಾ ಆಳವಡಿಸಲಾಗಿದೆ.

ಡೆಲ್ಲಿಗೆ ನಾಯಕ ಪಂತ್, ಹೆಟ್ಮೆಯರ್ ಆಸರೆ

15 ಓವರ್ ಅಂತ್ಯಕ್ಕೆ ಡೆಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿದೆ. ನಾಯಕ ರಿಷಭ್ ಪಂತ್ (12*) ಹಾಗೂ ಶಿಮ್ರೊನ್ ಹೆಟ್ಮೆಯರ್ (22*) ಕ್ರೀಸಿನಲ್ಲಿದ್ದಾರೆ. 

'ಮಿಸ್ಟರ್ ಐಪಿಎಲ್' ರೈನಾಗಿಲ್ಲ ಅವಕಾಶ

60 ರನ್ ಗಳಿಸಿ ಪೃಥ್ವಿ ಶಾ ಔಟ್

27 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಪೃಥ್ವಿ ಶಾ

ಹ್ಯಾಜಲ್‌ವುಡ್‌ಗೆ ಎರಡು ವಿಕೆಟ್

ಪವರ್ ಪ್ಲೇ ಅಂತ್ಯಕ್ಕೆ 51/2

ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಬಿರುಸಿನ ಆರಂಭವೊದಗಿಸಿದರು. ಆದರೆ ಅನುಭವಿ ಶಿಖರ್ ಧವನ್ (7) ಹಾಗೂ ಶ್ರೇಯಸ್ ಅಯ್ಯರ್ (1) ಅವರಿಂದ ಸೂಕ್ತ ಬೆಂಬಲ ಸಿಗಲಿಲ್ಲ.  ಪವರ್ ಪ್ಲೇ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ. 

7 ರನ್ ಗಳಿಸಿ ಧವನ್ ಔಟ್

ಚಾಹರ್ ಒಂದೇ ಓವರ್‌ನಲ್ಲಿ ನಾಲ್ಕು ಬೌಂಡರಿ ಸಿಡಿಸಿದ ಪೃಥ್ವಿ

ಧೋನಿ-ಪಂತ್ ದಾಖಲೆ

ಬ್ರಾವೊ ಮೈಲಿಗಲ್ಲು

ರೋಚಕ ಕದನ

ಪ್ಲೇಯಿಂಗ್-ಇಲೆವೆನ್

ಟಾಸ್ ಝಲಕ್

ಟಾಸ್ ಗೆದ್ದ ಧೋನಿ ಫೀಲ್ಡಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ

ಡೆಲ್ಲಿ ಪಡೆ ತಯಾರಿ

ಗೆದ್ದವರಿಗೆ ಫೈನಲ್ ಟಿಕೆಟ್

ಫಾರ್ಮ್‌ಗೆ ಮರಳುವರೇ ಧೋನಿ?

ಮಹಿ ಪಡೆ

ಚೆನ್ನೈಗೆ ಅಭಿಮಾನಿಗಳ ಬೆಂಬಲ

ಪಿಚ್ ಪರಿಶೀಲಿಸುತ್ತಿರುವ ಪಂತ್

ವೇದಿಕೆ ಸಜ್ಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.