ADVERTISEMENT

IPL 2021 | DC vs RR: ಗೆಲುವಿನ ಓಟ ಮುಂದುವರಿಸಿದ ಡೆಲ್ಲಿ; ರಾಜಸ್ಥಾನ್‌ಗೆ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 33 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಗೆಲುವಿನ ಓಟ ಮುಂದುವರಿಸಿದೆ.

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 14:03 IST
Last Updated 25 ಸೆಪ್ಟೆಂಬರ್ 2021, 14:03 IST

ಡೆಲ್ಲಿ ಅಗ್ರ; ಪ್ಲೇ-ಆಫ್ ಬಹುತೇಕ ಖಚಿತ

ಡೆಲ್ಲಿ ಅಜೇಯ, ರಾಜಸ್ಥಾನ್‌ಗೆ ಗೆಲುವು

ಐಪಿಎಲ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ 33 ರನ್ ಅಂತರದ ಗೆಲುವು ದಾಖಲಿಸಿದೆ. 

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಆರು ವಿಕೆಟ್ ನಷ್ಟಕ್ಕೆ 154 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಡೆಲ್ಲಿ ಬೌಲರ್‌ಗಳ ನಿಖರ ದಾಳಿಗೆ ನಲುಗಿದ ರಾಜಸ್ಥಾನ್, ನಾಯಕ ಸಂಜು ಸ್ಯಾಮ್ಸನ್ (70*) ಹೋರಾಟದ ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ADVERTISEMENT

ಸಂಜು ಅರ್ಧಶತಕ

ಈ ನಡುವೆ ದಿಟ್ಟ ಹೋರಾಟ ತೋರಿದ ಸಂಜು ಸ್ಯಾಮ್ಸನ್ ಅರ್ಧಶತಕ ಸಾಧನೆ ಮಾಡಿದರು. 

ಸೋಲಿನ ಭೀತಿಯಲ್ಲಿ ರಾಜಸ್ಥಾನ್

55 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿರುವ ರಾಜಸ್ಥಾನ್ ಸಂಕಷ್ಟಕ್ಕೆ ಸಿಲುಕಿದೆ. ನಾಯಕ ಸಂಜು ಸ್ಯಾಮ್ಸನ್ ಕ್ರೀಸಿನಲ್ಲಿದ್ದಾರೆ. 

ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳ ವೈಫಲ್ಯ

10 ಓವರ್‌ಗಳ ಅಂತ್ಯಕ್ಕೆ ರಾಜಸ್ಥಾನ್ ಮೂರು ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿತ್ತು. ಅಲ್ಲದೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 107 ರನ್‌ಗಳ ಅವಶ್ಯಕತೆಯಿತ್ತು. 

ಡೆಲ್ಲಿ ಬೌಲರ್‌ಗಳ ಮಿಂಚು

ಡೆಲ್ಲಿ ಹಿಡಿತದಲ್ಲಿ ಪಂದ್ಯ

ರಾಜಸ್ಥಾನ್ ಮೂರು ವಿಕೆಟ್ ಪತನ

ಪವರ್ ಪ್ಲೇ ಅಂತ್ಯಕ್ಕೆ 21 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಿರುವ ರಾಜಸ್ಥಾನ್ ಸಂಕಷ್ಟದಲ್ಲಿದೆ. 

ಯಾರಿಗೆ ಒಲಿಯಲಿದೆ ಗೆಲುವು?

ಆರು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದ ಡೆಲ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿರುವ ಡೆಲ್ಲಿ ಕ್ಯಾಪಿಟಲ್ಸ್, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ154 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ. 

ರಾಜಸ್ಥಾನ್ ಬೌಲರ್‌ಗಳ ನಿಖರ ದಾಳಿ

43 ರನ್ ಗಳಿಸಿ ಅಯ್ಯರ್ ಔಟ್, ಡೆಲ್ಲಿ ನಾಲ್ಕನೇ ವಿಕೆಟ್ ಪತನ

15 ಓವರ್ ಅಂತ್ಯಕ್ಕೆ ಡೆಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿತ್ತು.

24 ರನ್ ಗಳಿಸಿ ಪಂತ್ ಔಟ್

ಅಯ್ಯರ್, ಪಂತ್ ಅರ್ಧಶತಕದ ಜೊತೆಯಾಟ

ನಾಯಕ ಪಂತ್, ಅಯ್ಯರ್ ಉತ್ತಮ ಆಟ

ಡೆಲ್ಲಿಗೆ ನಾಯಕ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಆಸರೆಯಾದರು. 10 ಓವರ್ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತ್ತು. 

ರಾಜಸ್ಥಾನ್ ಮೇಲುಗೈ

ಡೆಲ್ಲಿ ಕ್ಯಾಪಿಟಲ್ಸ್ ಆರಂಭ ಉತ್ತಮವಾಗಿರಲಿಲ್ಲ. 21 ರನ್ ಗಳಿಸುವುದರೆಡೆಗೆ ಆರಂಭಿಕರಾದ ಶಿಖರ್ ಧವನ್ (8) ಹಾಗೂ ಪೃಥ್ವಿ ಶಾ (10) ವಿಕೆಟ್‌ಗಳು ನಷ್ಟವಾಗಿದ್ದವು.

ಟಾಸ್ ಝಲಕ್

ಆಡುವ ಬಳಗ ಇಂತಿದೆ:

ಟಾಸ್ ಗೆದ್ದ ಸಂಜು ಫೀಲ್ಡಿಂಗ್ ಆಯ್ಕೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಡೆಲ್ಲಿ vs ರಾಜಸ್ಥಾನ

ರಿಷಭ್ ಪಂತ್ vs ಸಂಜು ಸ್ಯಾಮ್ಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.