ADVERTISEMENT

IPL 2021 | MI vs DC: ಮುಂಬೈ ವಿರುದ್ಧ ಡೆಲ್ಲಿ ಜಯಭೇರಿ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಮುಂಬೈ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 14:19 IST
Last Updated 2 ಅಕ್ಟೋಬರ್ 2021, 14:19 IST

ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಡೆಲ್ಲಿಗೆ ರೋಚಕ ಜಯ

ಡೆಲ್ಲಿ ಗೆಲುವಿನ ರೋಚಕ ಕ್ಷಣ

ಡೆಲ್ಲಿಗೆ ರೋಚಕ ಗೆಲುವು

ಶ್ರೇಯಸ್ ಅಯ್ಯರ್ (33*) ಹಾಗೂ ರವಿಚಂದ್ರನ್ ಅಶ್ವಿನ್ (20*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. 

ಇದರೊಂದಿಗೆ ಮುಂಬೈ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣವೆನಿಸಿದೆ. 

ADVERTISEMENT

ಆವೇಶ್ ಖಾನ್ (15ಕ್ಕೆ 3) ಹಾಗೂ ಅಕ್ಷರ್ ಪಟೇಲ್ (21ಕ್ಕೆ 3) ದಾಳಿಗೆ ತತ್ತರಿಸಿರುವ ಮುಂಬೈ ಇಂಡಿಯನ್ಸ್, ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಬಳಿಕ ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಒಂದು ಹಂತದಲ್ಲಿ 13.1 ಓವರ್‌ಗಳಲ್ಲಿ 93 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಅಯ್ಯರ್ ಹಾಗೂ ಅಶ್ವಿನ್ ಮುರಿಯದ ಏಳನೇ ವಿಕೆಟ್‌ಗೆ 37 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಡೆಲ್ಲಿ 6ನೇ ವಿಕೆಟ್ ಪತನ, 30 ಎಸೆತಗಳಲ್ಲಿ ಗೆಲುವಿಗೆ 30 ರನ್ ಬೇಕು

ಡೆಲ್ಲಿ ಐದನೇ ವಿಕೆಟ್ ಪತನ

ಪಂತ್ ಔಟ್, ಮುಂಬೈ ತಿರುಗೇಟು

ಈ ಸಂದರ್ಭದಲ್ಲಿ ಕೌಂಟರ್ ಅಟ್ಯಾಕ್ ಮಾಡಿದ ನಾಯಕ ರಿಷಭ್ ಪಂತ್ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಆದರೆ ಪಂತ್ ಓಟಕ್ಕೆ ಜಯಂತ್ ಯಾದವ್ ಕಡಿವಾಣ ಹಾಕಿದರು. 10 ಓವರ್ ಅಂತ್ಯಕ್ಕೆ ಡೆಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 65 ರನ್ ಬೇಕಿದೆ. 

ಮುಂಬೈ ತಿರುಗೇಟು

ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಆರಂಭ ಉತ್ತಮವಾಗಿರಲಿಲ್ಲ. ಶಿಖರ್ ಧವನ್ (8) ಹಾಗೂ ಪೃಥ್ವಿ ಶಾ (6) ಹಾಗೂ ಸ್ಟೀವ್ ಸ್ಮಿತ್ (9) ನಿರಾಸೆ ಮೂಡಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ. 

ಅಕ್ಷರ್-ಆವೇಶ್ ದಾಳಿಗೆ ಮುಂಬೈ ತತ್ತರ

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳಾದ ಆವೇಶ್ ಖಾನ್ (15ಕ್ಕೆ 3) ಹಾಗೂ ಅಕ್ಷರ್ ಪಟೇಲ್ (21ಕ್ಕೆ 3) ದಾಳಿಗೆ ತತ್ತರಿಸಿರುವ ಮುಂಬೈ ಇಂಡಿಯನ್ಸ್, ಶನಿವಾರ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 129 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಸೂರ್ಯಕುಮಾರ್ ಯಾದವ್ ಗರಿಷ್ಠ 33 ರನ್ ಗಳಿಸಿದರು. ನಾಯಕ ರೋಹಿತ್ ಶರ್ಮಾ (7), ಕೀರನ್ ಪೊಲಾರ್ಡ್ (6), ಹಾರ್ದಿಕ್ ಪಾಂಡ್ಯ (17) ವೈಫಲ್ಯವನ್ನು ಅನುಭವಿಸಿದರು. ಕೃಣಾಲ್ ಪಾಂಡ್ಯ 13 ರನ್ ಗಳಿಸಿ ಔಟಾಗದೆ ಉಳಿದರು. ಡೆಲ್ಲಿ ಪರ ಆವೇಶ್ ಖಾನ್ ಹಾಗೂ ಅಕ್ಷರ್ ಪಟೇಲ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು. 

ಆವೇಶ್ ಖಾನ್‌ಗೆ ಮೂರು ವಿಕೆಟ್

ಮುಂಬೈ 87ಕ್ಕೆ 5ನೇ ವಿಕೆಟ್ ಪತನ

33 ರನ್ ಗಳಿಸಿ ಸೂರ್ಯಕುಮಾರ್ ಔಟ್

ಮುಂಬೈಗೆ ಸೂರ್ಯಕುಮಾರ್ ಆಸರೆ

10 ಓವರ್ ಅಂತ್ಯಕ್ಕೆ ಮುಂಬೈ ಎರಡು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ. ಆರಂಭಿಕರಾದ ನಾಯಕ ರೋಹಿತ್ ಶರ್ಮಾ (7) ಹಾಗೂ ಕ್ವಿಂಟನ್ ಡಿ ಕಾಕ್ (19) ವಿಕೆಟ್ ನಷ್ಟವಾಗಿದೆ. ಸೂರ್ಯಕುಮಾರ್ ಯಾದವ್ (32*) ಹಾಗೂ ಸೌರಭ್ ತಿವಾರಿ (7*) ಕ್ರೀಸಿನಲ್ಲಿದ್ದಾರೆ. 

ಡಿ ಕಾಕ್ ಹೊರದಬ್ಬಿದ ಅಕ್ಷರ್

ಪವರ್ ಪ್ಲೇ ಅಂತ್ಯಕ್ಕೆ 35/1

ರೋಹಿತ್ 7 ರನ್ ಗಳಿಸಿ ಔಟ್

ಪ್ಲೇ-ಆಫ್ ಪ್ರವೇಶಿಸಿದ ಎರಡನೇ ತಂಡ ಡೆಲ್ಲಿ

ಇತ್ತಂಡಗಳಲ್ಲೂ ತಲಾ ಒಂದು ಬದಲಾವಣೆ

ಟಾಸ್ ಝಲಕ್

ಟಾಸ್ ಗೆದ್ದ ಪಂತ್ ಫೀಲ್ಡಿಂಗ್ ಆಯ್ಕೆ

ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಪಂತ್ vs ರೋಹಿತ್

ಪಂದ್ಯಕ್ಕೂ ಮುನ್ನ

ಪ್ಲೇ-ಆಫ್ ಪ್ರವೇಶಿಸಿರುವ ಡೆಲ್ಲಿ

ಗೆಳೆಯರ ಮಿಲನ

ಮುಂಬೈಗೆ ಮಹತ್ವದ ಪಂದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.