ADVERTISEMENT

IPL 2021 | RCB vs KKR: ಮ್ಯಾಕ್ಸ್‌ವೆಲ್-ಎಬಿಡಿ ಗೆಲುವಿನ ರೂವಾರಿ; ಆರ್‌ಸಿಬಿಗೆ 'ಹ್ಯಾಟ್ರಿಕ್' ಜಯ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 38 ರನ್ ಅಂತರದ ಅಧಿಕಾರಯುತ ಗೆಲುವು ದಾಖಲಿಸಿದೆ. ಇದರೊಂದಿಗೆ ಸತತ ಮೂರನೇ ಗೆಲುವು ಬಾರಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 16:28 IST
Last Updated 18 ಏಪ್ರಿಲ್ 2021, 16:28 IST

ದ.ಆಫ್ರಿಕಾ ವಿಶ್ವಕಪ್ ತಂಡಕ್ಕೂ ಪುನರಾಗಮನ ಮಾಡಲಿರುವ ಎಬಿ ಡಿ?

ವಿಲಿಯರ್ಸ್-ಮ್ಯಾಕ್ಸ್‌ವೆಲ್ ಅಬ್ಬರ; ಆರ್‌ಸಿಬಿ ವಿಜಯೋತ್ಸವ

ಮ್ಯಾಕ್ಸ್‌ವೆಲ್, ಎಬಿಡಿ ಸಿಡಿಲಬ್ಬರದ ಬ್ಯಾಟಿಂಗ್; ಕೊಹ್ಲಿ ಸಂಭ್ರಮ

ಡೆಲ್ಲಿ vs ಪಂಜಾಬ್ ಲೈವ್ ಅಪ್‌ಡೇಟ್ ಇಲ್ಲಿ ನೋಡಿ

ಮ್ಯಾಕ್ಸ್‌ವೆಲ್, ಎಬಿ ಡಿ ಅಬ್ಬರದ ಮುಂದೆ ಕೆಕೆಆರ್ ಠುಸ್ ಪಟಾಕಿ

ಆರ್‌ಸಿಬಿ ವಿಜಯೋತ್ಸವ

ಮೊದಲ ಮೂರು ಪಂದ್ಯಗಳಲ್ಲೂ ಆರ್‌ಸಿಬಿಗೆ ಭರ್ಜರಿ ಗೆಲುವು

ಸತತ 3ನೇ ಗೆಲುವು ಬಾರಿಸಿದ ಆರ್‌ಸಿಬಿ - ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಗ್ಲೆನ್ ಮ್ಯಾಕ್ಸ್‌ವೆಲ್ (78) ಹಾಗೂ ಎಬಿ ಡಿ ವಿಲಿಯರ್ಸ್ (76*) ಬಿರುಸಿನ ಅರ್ಧಶತಕಗಳ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 38 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಐಪಿಎಲ್ 14ನೇ ಆವೃತ್ತಿಯಲ್ಲಿ ಸತತ ಮೂರನೇ ಗೆಲುವು ಬಾರಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಮ್ಯಾಕ್ಸ್‌ವೆಲ್ ಹಾಗೂ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನರೆವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಕೋಲ್ಕತ ಯಾವ ಹಂತದಲ್ಲೂ ಹೋರಾಟದ ಮನೋಭಾವ ತೋರಲೇ ಇಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆರ್‌ಸಿಬಿ ಪರ ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 78 ರನ್ ಬಾರಿಸಿದರೆ ಅದಕ್ಕಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ಎಬಿಡಿ 34 ಎಸೆತಗಳಲ್ಲಿ ಅಜೇಯ 76 ರನ್ ಸಾಧನೆ ಮಾಡಿದರು. 

ADVERTISEMENT

ಡಬಲ್ ಆಘಾತ ನೀಡಿದ ಕೈಲ್ ಜೇಮಿಸನ್

ರಸೆಲ್ 6,4,4,4

ಯುಜುವೇಂದ್ರ ಚಹಲ್ ಓವರ್‌ವೊಂದರಲ್ಲಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿ ಸೇರಿದಂತೆ ಆ್ಯಂಡ್ರೆ ರಸೆಲ್ 20 ರನ್ ಚಚ್ಚಿದರು. ಈ ಮೂಲಕ ಕೋಲ್ಕತ್ತ ಪರ ದಿಟ್ಟ ಹೋರಾಟ ನೀಡಿದರು. 

29 ರನ್ ಗಳಿಸಿದ ಕೆಕೆಆರ್ ನಾಯಕ ಮಾರ್ಗನ್ ಹೊರದಬ್ಬಿದ ಹರ್ಷಲ್ ಪಟೇಲ್

30 ಎಸೆತಗಳಲ್ಲಿ ಕೆಕೆಆರ್ ಗೆಲುವಿಗೆ ಬೇಕು 84 ರನ್

15 ಓವರ್ ವೇಳೆಗೆ ಕೆಕೆಆರ್ ಐದು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಅಂತಿಮ 30 ಎಸೆತಗಳಲ್ಲಿ ಗೆಲುವಿಗೆ 84 ರನ್ ಬೇಕಾಗಿತ್ತು. 

10 ಓವರ್‌ಗೆ ಕೆಕೆಆರ್ 83/4

ಚಾಹಲ್‌ಗೆ ಎರಡನೇ ವಿಕೆಟ್, ನಿರಾಸೆ ಮೂಡಿಸಿದ ಡಿಕೆ

ದಿನೇಶ್ ಕಾರ್ತಿಕ್ (2) ಅವರನ್ನು ಯಜುವೇಂದ್ರ ಚಾಹಲ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದರು. ಇದರೊಂದಿಗೆ 74 ರನ್ನಿಗೆ ಕೆಕೆಆರ್ ನಾಲ್ಕನೇ ವಿಕೆಟ್ ಪತನಗೊಂಡಿತ್ತು. 

ಚಾಹಲ್ ಅಭಿನಂದಿಸುತ್ತಿರುವ ಮ್ಯಾಕ್ಸ್‌ವೆಲ್

ಕೆಕೆಆರ್‌ಗೆ ಆರ್‌ಸಿಬಿ ತಿರುಗೇಟು

ವಿಲಿಯರ್ಸ್ ಆಟದ ಝಲಕ್

ಪ್ರಸಕ್ತ ಋತುವಿನಲ್ಲಿ ಮೊದಲ ವಿಕೆಟ್ ಪಡೆದ ಚಾಹಲ್

ಉತ್ತಮವಾಗಿ ಆಡುತ್ತಿದ್ದ ನಿತೀಶ್ ರಾಣಾ (18) ಅವರನ್ನು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹೊರದಬ್ಬಿದ್ದರು. ಈ ಮೂಲಕ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ವಿಕೆಟ್ ಪಡೆದರು. 

ತ್ರಿಪಾಠಿ-ರಾಣಾ ಹೋರಾಟಕ್ಕೆ ಬ್ರೇಕ್

ಗಿಲ್ ಪತನದ ಬಳಿಕ ಕ್ರೀಸಿಗಳಿದ ರಾಹುಲ್ ತ್ರಿಪಾಠಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಗೆ ನಿತೀಶ್ ರಾಣಾ ಸಾಥ್ ನೀಡಿದರು. ಪರಿಣಾಮ ಪವರ್ ಪ್ಲೇ ಅಂತಿಮ ಎಸೆತದಲ್ಲಿ ವಿಕೆಟ್ ಒಪ್ಪಿಸಿ ತ್ರಿಪಾಠಿ ನಿರಾಸೆ ಅನುಭವಿಸಿದರು. 20 ಎಸೆತಗಳನ್ನು ಎದುರಿಸಿದ ತ್ರಿಪಾಠಿ ಐದು ಬೌಂಡರಿಗಳಿಂದ 25 ರನ್ ಗಳಿಸಿದರು. 

ಡ್ಯಾನಿಯಲ್ ಕ್ರಿಸ್ಟಿಯನ್ ಅಮೋಘ ಕ್ಯಾಚ್

ಶುಭಮನ್ ಗಿಲ್ ವಿಕೆಟ್ ಪತನ

205 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ಕೆಕೆಆರ್ ದಿಟ್ಟ ಪ್ರತ್ಯುತ್ತರವನ್ನೇ ನೀಡಿತ್ತು. ಕೈಲ್ ಜೇಮಿಸನ್ ಒಂದೇ ಓವರ್‌ನಲ್ಲಿ ತಲಾ ಎರಡು ಬೌಂಡರಿ ನೆರವಿನಿಂದ 20 ರನ್ ಚಚ್ಚಿದ್ದರು. ಆದರೆ ಅದೇ ಓವರ್‌ನಲ್ಲಿ ಶುಭಮನ್ ಗಿಲ್ (21) ವಿಕೆಟ್ ಪಡೆಯುವ ಮೂಲಕ ತಿರುಗೇಟು ನೀಡಿದರು. 

ಕಠಿಣ ಪಿಚ್‌ನಲ್ಲೂ 200ರ ಗಡಿ ದಾಟಿದ ಆರ್‌ಸಿಬಿ

ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಮನಮೋಹಕ ಆಟ

ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಬ್ಯಾಟಿಂಗ್

ಗ್ಲೆನ್ ಮ್ಯಾಕ್ಸ್‌ವೆಲ್ (78) ಹಾಗೂ ಎಬಿ ಡಿ ವಿಲಿಯರ್ಸ್ (76*) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. 

ಮ್ಯಾಕ್ಸ್‌ವೆಲ್ 49 ಎಸೆತಗಳಲ್ಲಿ 78 ರನ್ ಬಾರಿಸಿದರೆ ಅದಕ್ಕಿಂತಲೂ ಬಿರುಸಾಗಿ ಬ್ಯಾಟ್ ಬೀಸಿದ ಎಬಿಡಿ 34 ಎಸೆತಗಳಲ್ಲಿ ಅಜೇಯ 76 ರನ್ ಸಾಧನೆ ಮಾಡಿದರು. 

27 ಎಸೆತಗಳಲ್ಲಿ ವಿಲಿಯರ್ಸ್ ಫಿಫ್ಟಿ ಸಾಧನೆ

ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಎಬಿ ಡಿ ವಿಲಿಯರ್ಸ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. 

ಮ್ಯಾಕ್ಸ್‌ವೆಲ್-ವಿಲಿಯರ್ಸ್ ಫಿಫ್ಟಿ ಜೊತೆಯಾಟ

78 ರನ್ ಗಳಿಸಿ ಮ್ಯಾಕ್ಸ್‌ವೆಲ್ ನಿರ್ಗಮನ

ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿ ವಿಲಿಯರ್ಸ್ ನಾಲ್ಕನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 49 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ 78 ರನ್ ಗಳಿಸಿದರು. ಅವರ ಈ ಮನಮೋಹಕ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. 

4,4,6 - 15ನೇ ಓವರ್‌ನಲ್ಲಿ ಮತ್ತೆ 17 ರನ್ ಚಚ್ಚಿದ ಮ್ಯಾಕ್ಸ್‌ವೆಲ್-ವಿಲಿಯರ್ಸ್

15 ಓವರ್‌ನಲ್ಲಿ 17 ರನ್‌ಗಳು ಹರಿದು ಬಂದಿದ್ದವು. ಈ ವೇಳೆಗೆ ಆರ್‌ಸಿಬಿ ಮೂರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತ್ತು. 

86 ರನ್ ಜೊತೆಯಾಟ

ಜೊತೆಯಾಟ ಮುರಿದ ಪ್ರಸಿದ್ಧ

ಮ್ಯಾಕ್ಸ್‌ವೆಲ್-ಪಡಿಕ್ಕಲ್ ಜೊತೆಯಾಟ ಮುರಿದ ಪ್ರಸಿದ್ಧ ಕೃಷ್ಣ

ಈ ನಡುವೆ ದಾಳಿಗಿಳಿದ ಪ್ರಸಿದ್ಧ ಕೃಷ್ಣ, ದೇವದತ್ತ ಪಡಿಕ್ಕಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 28 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ ಎರಡು ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿದರು. ಅಲ್ಲದೆ ತೃತೀಯ ವಿಕೆಟ್‌ಗೆ ಮ್ಯಾಕ್ಸ್‌ವೆಲ್ ಜೊತೆ 86 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 

10 ಓವರ್ ಅಂತ್ಯಕ್ಕೆ ಆರ್‌ಸಿಬಿ ಸ್ಕೋರ್‌

ಐಪಿಎಲ್‌ನಲ್ಲಿ 8ನೇ ಅರ್ಧಶತಕ ಸಾಧನೆ ಮಾಡಿದ ಮ್ಯಾಕ್ಸ್‌ವೆಲ್

28 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ ಮ್ಯಾಕ್ಸ್‌ವೆಲ್

ಮಗದೊಂದು ಗಮನಾರ್ಹ ಇನ್ನಿಂಗ್ಸ್ ಕಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 28 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. 

Fair Play ಪಟ್ಟಿ

ಮ್ಯಾಕ್ಸ್‌ವೆಲ್-ಪಡಿಕ್ಕಲ್ ಫಿಫ್ಟಿ ಜೊತಯಾಟ

6,4,4: 6ನೇ ಓವರ್‌ನಲ್ಲಿ 17 ರನ್

ಮ್ಯಾಕ್ಸ್‌ವೆಲ್, ಪಡಿಕ್ಕಲ್ ಆಸರೆ

ಈ ಹಂತದಲ್ಲಿ ಜೊತೆಗೂಡಿದ ದೇವದತ್ತ ಪಡಿಕ್ಕಲ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡಕ್ಕೆ ಆಸರೆಯಾದರು. ಪವರ್ ಪ್ಲೇ ಅಂತ್ಯಕ್ಕೆ ಆರ್‌ಸಿಬಿ ಎರಡು ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತ್ತು. 

ಅದ್ಭುತ ಕ್ಯಾಚ್ ಹಿಡಿದ ತ್ರಿಪಾಠಿ

ಆರ್‌ಸಿಬಿ ಕಳಪೆ ಆರಂಭ

ಡ್ಯಾನಿಯಲ್ ಕ್ರಿಸ್ಟಿಯನ್ ಸ್ಥಾನದಲ್ಲಿ ಕಾಣಿಸಿಕೊಂಡ ರಜತ್ ಪಾಟೀದಾರ್ (1) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಇದರೊಂದಿಗೆ 9 ರನ್ ಗಳಿಸುವುದರೆಡೆಗೆ ಎರಡನೇ ವಿಕೆಟ್ ಪತನಗೊಂಡಿತ್ತು. 

5 ರನ್ ಗಳಿಸಿದ ಕ್ಯಾಪ್ಟನ್ ಕೊಹ್ಲಿ ಔಟ್, ಆರ್‌ಸಿಬಿಗೆ ಮೊದಲ ಆಘಾತ

ವರುಣ್ ಚಕ್ರವರ್ತಿ ದಾಳಿಯಲ್ಲಿ ಕೇವಲ 5 ರನ್ ಗಳಿಸಿದ ವಿರಾಟ್ ಕೊಹ್ಲಿ ಔಟ್ ಆಗಿ ನಿರಾಸೆ ಮೂಡಿಸಿದರು. ರಾಹುಲ್ ತ್ರಿಪಾಠಿ ಅತ್ಯುತ್ತಮ ಕ್ಯಾಚ್ ಹಿಡಿಯುವ ಮೂಲಕ ವಿರಾಟ್ ಹೊರದಬ್ಬುವಲ್ಲಿ ನೆರವಾದರು. 

ಟಾಸ್ ಗೆದ್ದ ನಾಯಕ ಕೊಹ್ಲಿ ಬ್ಯಾಟಿಂಗ್ ಆಯ್ಕೆ

ಕೊಹ್ಲಿ vs ಮಾರ್ಗನ್

ಆಡುವ ಬಳಗ ಇಂತಿದೆ:

ಮಗದೊಂದು ರೋಚಕ ಕದನ ನಿರೀಕ್ಷೆ

ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ಕೊಹ್ಲಿ ಪಡೆಗೆ ಮಾರ್ಗನ್ ಬಳಗದ ಸವಾಲು

ವೇದಿಕೆ ಸಜ್ಜು

ಕೊಹ್ಲಿ vs ಮಾರ್ಗನ್ ವಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.