ADVERTISEMENT

IPL 2021 | SRH vs RR: ರಾಜಸ್ಥಾನ್‌ಗೆ ಸೋಲಿನ ಆಘಾತ; ಕೊನೆಗೂ ಗೆದ್ದ ಹೈದರಾಬಾದ್

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಹೈದರಾಬಾದ್ ಪರ ಜೇಸನ್ ರಾಯ್ (60) ಹಾಗೂ ನಾಯಕ ಕೇನ್ ವಿಲಿಯಮ್ಸನ್ (51*) ಆಕರ್ಷಕ ಅರ್ಧಶತಕಗಳನ್ನು ಬಾರಿಸಿದರು. ಅತ್ತ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ (82) ಏಕಾಂಗಿ ಹೋರಾಟವು ವ್ಯರ್ಥವೆನಿಸಿತು.

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 18:01 IST
Last Updated 27 ಸೆಪ್ಟೆಂಬರ್ 2021, 18:01 IST

ಹೈದರಾಬಾದ್ ಪರ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಜೇಸನ್ ರಾಯ್

ನಾಯಕನ ಆಟವಾಡಿದ ವಿಲಿಯಮ್ಸನ್

ಗೆಲುವಿನ ರೋಚಕ ಕ್ಷಣ

ಹೈದರಾಬಾದ್‌ಗೆ 2ನೇ ಗೆಲುವು, ಅಂಕಪಟ್ಟಿ ಇಂತಿದೆ

ಗೆಲುವಿನ ಹಾದಿಗೆ ಮರಳಿದ ಹೈದರಾಬಾದ್

ಹೈದರಾಬಾದ್‌ಗೆ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು

ಜೇಸನ್ ರಾಯ್ (60) ಹಾಗೂ ನಾಯಕ ಕೇನ್ ವಿಲಿಯಮ್ಸನ್ (51*) ಸಮಯೋಚಿತ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಸತತ ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ತಂಡವು ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಅತ್ತ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟವು ವ್ಯರ್ಥವೆನಿಸಿದೆ. 

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ನಾಯಕ ಸಂಜು ಬಿರುಸಿನ ಅರ್ಧಶತಕದ (82) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಗುರಿ ಬೆನ್ನತ್ತಿದ ಹೈದರಾಬಾದ್, 18.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು.

ನಾಯಕ ವಿಲಿಯಮ್ಸನ್ ಆಸರೆ

ಅಂತಿಮ 24 ಎಸೆತಗಳಲ್ಲಿ ಹೈದರಾಬಾದ್ ಗೆಲುವಿಗೆ 26 ರನ್‌ಗಳ ಅಗತ್ಯವಿದೆ.

ಫಿಫ್ಟಿ ಬಳಿಕ ರಾಯ್ ವಿಕೆಟ್ ಪತನ

ಜೇಸನ್ ರಾಯ್ ಬಿರುಸಿನ ಫಿಫ್ಟಿ

ರಾಜಸ್ಥಾನ್ ಪರ ಮೊದಲ ಯಶಸ್ಸು ಗಳಿಸಿದ ಲೊಮ್ರೊರ್

ಜೇಸನ್ ರಾಯ್ 36 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಜೇಸನ್ ರಾಯ್ ಆಕರ್ಷಕ ಅರ್ಧಶತಕ ಬಾರಿಸಿದರು. 

10 ಓವರ್ ಅಂತ್ಯಕ್ಕೆ ಹೈದರಾಬಾದ್ 90/1

10 ಓವರ್ ಅಂತ್ಯಕ್ಕೆ ಹೈದರಾಬಾದ್ ಒಂದು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ಅಂತಿಮ 60 ಎಸೆತಗಳಲ್ಲಿ ತಂಡದ ಗೆಲುವಿಗೆ 75 ರನ್‌ಗಳ ಅವಶ್ಯಕತೆಯಿತ್ತು. ಜೇಸನ್ ರಾಯ್ (41*) ಹಾಗೂ ನಾಯಕ ಕೇನ್ ವಿಲಿಯಮ್ಸನ್ (22*) ಕ್ರೀಸಿನಲ್ಲಿದ್ದಾರೆ. 

ಪವರ್ ಪ್ಲೇ ಅಂತ್ಯಕ್ಕೆ ಹೈದರಾಬಾದ್ 63/1

ಸವಾಲಿನ ಮೊತ್ತ ಬೆನ್ನತ್ತಿದ ಹೈದರಾಬಾದ್‌ಗೆ ಜೇಸನ್ ರಾಯ್ ಹಾಗೂ ವೃದ್ಧಿಮಾನ್ ಸಹಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 57 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 18 ರನ್ ಗಳಿಸಿದ ಸಹಾ ಔಟ್ ಆದರು. 

ಹೈದರಾಬಾದ್‌ಗೆ 165 ರನ್ ಗೆಲುವಿನ ಗುರಿ ಒಡ್ಡಿದ ರಾಜಸ್ಥಾನ್

ನಾಯಕ ಸಂಜು ಸ್ಯಾಮ್ಸನ್ ಬಿರುಸಿನ ಅರ್ಧಶತಕದ (82) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. 

ಯಶಸ್ವಿ ಜೈಸ್ವಾಲ್ (36) ಹಾಗೂ ಮಹಿಪಾಲ್ ಲೊಮ್ರೊರ್ (29*) ಸಹ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 

ಸಂದೀಪ್ ಶರ್ಮಾ ಉತ್ತಮ ದಾಳಿ

ಉಪಯುಕ್ತ ಇನ್ನಿಂಗ್ಸ್ ಕಟ್ಟಿದ ಜೈಸ್ವಾಲ್

ನಿರಾಸೆ ಮೂಡಿಸಿದ ಲಿವಿಂಗ್‌ಸ್ಟೋನ್

ಕೇವಲ 4 ರನ್ ಗಳಿಸಿದ ಲಿವಿಂಗ್‌ಸ್ಟೋನ್ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟ್ ಆದರು. 

10 ಓವರ್ ಅಂತ್ಯಕ್ಕೆ ರಾಜಸ್ಥಾನ್ 77/2

10 ಓವರ್ ಅಂತ್ಯಕ್ಕೆ ರಾಜಸ್ಥಾನ್ ಎರಡು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತ್ತು. ಎವಿನ್ ಲೆವಿಸ್ (6) ಹಾಗೂ ಯಶಸ್ವಿ ಜೈಸ್ವಾಲ್ (36) ಔಟ್ ಆದರು. 

ಸಂಜು-ಜೈಸ್ವಾಲ್ ಅರ್ಧಶತಕದ ಜೊತೆಯಾಟ

ರಾಜಸ್ಥಾನ್‌ಗೆ ಸಂಜು-ಜೈಸ್ವಾಲ್ ಆಸರೆ

ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಒಂದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತ್ತು. 

ರಾಜಸ್ಥಾನ್‌ಗೆ ಮೊದಲ ಆಘಾತ ನೀಡಿದ ಭುವನೇಶ್ವರ್ ಕುಮಾರ್

ಇತ್ತಂಡಗಳಿಗೂ ಮಹತ್ವದ ಪಂದ್ಯ

ವಾರ್ನರ್ ಹೊರಕ್ಕೆ; ಆಡುವ ಬಳಗ ಇಂತಿದೆ.

ಟಾಸ್ ಝಲಕ್

ಸನ್‌ರೈಸರ್ಸ್ ಪರ ಜೇಸನ್ ರಾಯ್ ಪದಾರ್ಪಣೆ

ಟಾಸ್ ಗೆದ್ದ ಸಂಜು ಬ್ಯಾಟಿಂಗ್ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ದುಬೈಯಲ್ಲಿ ಸನ್‌ರೈಸರ್ಸ್ ಬೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. 

ಸಂಜು ಮೇಲೆ ಹೆಚ್ಚಿದ ಜವಾಬ್ದಾರಿ

ಸ್ಯಾಮ್ಸನ್ vs ವಿಲಿಯಮ್ಸನ್

ಮೈದಾನ ಸಜ್ಜು

ಲಂಕಾದ ಮಾಜಿ ದಿಗ್ಗಜರ ಕದನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.